






ಕಾಣಿಯೂರು: ಭಾರತೀಯ ಸೇನೆಯ ಅಗ್ನಿವೀರ್ ಗೆ ಆಯ್ಕೆಗೊಂಡು ತರಬೇತಿಗಾಗಿ ಮಹಾರಾಷ್ಟ್ರದ ನಾಸಿಕ್ ಗೆ ತೆರಳುತ್ತಿರುವ ರವಿಕಿರಣ್ ಅಬೀರ ಹೊಸೋಕ್ಲು ಇವರಿಗೆ ಕಾಣಿಯೂರು
ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ, ಕಣ್ವರ್ಷಿ ಮಹಿಳಾ ಮಂಡಲದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು. ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ ಶುಭಹಾರೈಸಿದರು.



ಈ ಸಂದರ್ಭದಲ್ಲಿ ಕಾಣಿಯೂರು ಮಠದ ಮೆನೇಜರ್ ಶ್ರೀನಿಧಿ ಆಚಾರ್, ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕಾರ್ಯದರ್ಶಿ ಜಯಂತ ಅಬೀರ, ಉಪಾಧ್ಯಕ್ಷರಾದ ರಾಧಾಕೃಷ್ಣ ಪೆರ್ಲೋಡಿ, ಬಾಬು ಮಾದೋಡಿ, ಬಾಲಚಂದ್ರ ಅಬೀರ,ಕೋಶಾಧಿಕಾರಿ ಕೀರ್ತಿಕುಮಾರ್ ಎಲುವೆ, ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಓಡಬಾಯಿ, ಅಧ್ಯಕ್ಷ ರಾಜೇಶ್ ಮೀಜೆ, ಕಾರ್ಯದರ್ಶಿ ದೀಕ್ಷಿತ್ ಕಂಪ, ಉಪಾಧ್ಯಕ್ಷ ಧರ್ಮಪಾಲ ಕಲ್ಪಡ, ಕಣ್ವರ್ಷಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೋಹಿಣಿ ಅಬೀರ, ಅಧ್ಯಕ್ಷೆ ಮಮತಾ ಅಗಳಿ, ಕಾರ್ಯದರ್ಶಿ ನಾಗವೇಣಿ ಬೆದ್ರಾಜೆ, ಪಾರ್ವತಿ ಕಾಣಿಯೂರು, ನಿವೃತ್ತ ಯೋಧ ಬಾಲಕೃಷ್ಣ ಬಸ್ತಿ, ಪದ್ಮಯ್ಯ ಗೌಡ ಹೊಸೋಕ್ಲು, ಧರ್ಮೇಂದ್ರ ಗೌಡ ಕಟ್ಟತ್ತಾರು, ರಾಮಣ್ಣ ಗೌಡ ಮುಗರಂಜ, ಧರ್ಮಪಾಲ ಗೌಡ ಕಂಪ, ವಿನಯ್ ಎಲುವೆ, ಕುಶಾಲಪ್ಪ ಗೌಡ ಮುಗರಂಜ, ವಾಸುದೇವ ನಾಯ್ಕ್ ತೋಟ, ಸುಂದರ ಕಂಡೂರು, ಹರೀಶ್ ಮುಗರಂಜ, ಗಗನ್ ಮಠತ್ತಾರು ಶ್ರವಣ್ ಹೊಸೋಕ್ಲು, ದೇವಿಕಿರಣ್ ಹೊಸೋಕ್ಲು, ಮತ್ತಿತರರು ಉಪಸ್ಥಿತರಿದ್ದರು. ಕಾಣಿಯೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪರಮೇಶ್ವರ್ ಅನಿಲ ಕಾರ್ಯಕ್ರಮ ನಿರೂಪಿಸಿದರು.












