






ವಿಶೇಷ ಚೇತನವುಳ್ಳ ವ್ಯಕ್ತಿಗಳನ್ನು ಗೌರವದಿಂದ ನೋಡಬೇಕು – ರಮೇಶ್ ಎಸ್


ಕಾಣಿಯೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಾರ್ವಾಕದಲ್ಲಿ ಜೂನ್ ಮಾಹೆಯ ಸಂಭ್ರಮ ಶನಿವಾರ ಪ್ರಯುಕ್ತ ವಿಶೇಷ ಚೇತನವುಳ್ಳ ವ್ಯಕ್ತಿಗಳ ಪರಿಚಯ ಮತ್ತು ಸಂವಹನ ಕಾರ್ಯಕ್ರಮ ನಡೆಯಿತು. ದ್ಯೆಹಿಕ ನ್ಯೂನ್ಯತೆ ಇದ್ದಾಗ್ಯೂ ಅತ್ಯುನ್ನತ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಮಹತ್ಸಾಧನೆಯ ಕುರಿತು ವೀಡಿಯೊ ಮೂಲಕ ಪ್ರಸ್ತುತಪಡಿಸಲಾಯಿತು. 2 ಕೈಗಳಿಲ್ಲದಿದ್ದರೂ ತನ್ನೆರಡು ಕಾಲುಗಳ ಸಹಾಯದಿಂದಲೇ ನಭದೆತ್ತರಕ್ಕೆ ವಿಮಾನ ಉಡಾಯಿಸುವ ಅಮೇರಿಕಾದ ಮಹಿಳಾ ಪ್ಯೆಲೆಟ್ ಜೆಸ್ಸಿಕಾ ಕಾಕ್ಸ್ತನ್ನ 12ನೇ ವಯಸ್ಸಿನಲ್ಲಿ ಕಾಡಿದ ವಿಶಿಷ್ಟ ಖಾಯಿಲೆಯಿಂದಾಗಿ ಬದುಕಿನುದ್ದಕ್ಕೂ ವ್ಹೀಲ್ ಚೆಯರಿನಲ್ಲಿದ್ದುಕೊಂಡೇ ಹತ್ತಾರು ವ್ಯೆಜ್ಞಾನಿಕ ಸಾಧನೆ ಮಾಡಿದ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವ ವಿಖ್ಯಾತ ವಿಜ್ಞಾನಿ ಡಾ.ಸ್ಟಿಪನ್ ಹಾಕಿಂಗ್ಸ್ ಹಸುಳೆಯಾಗಿರುವಾಗ ಕಣ್ಣು ಬೇನೆಗೆ ಹೆತ್ತವರು ಮಾಡಿದ ನಾಟಿವ್ಯೆದ್ಯದಿಂದ ಕುರುಡನಾದರೂ ಮುಂದೆ ಜಗಮೆಚ್ಚಿದ ಸಂಗೀತ ಸಾಮ್ರಾಟನಾದ ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿಯವರ ಜೀವನ ಸಾಧನೆಗಳ ಬಗ್ಗೆ ಪ್ರೇರೇಪಿಸಲಾಯಿತು. ಸಾಧನೆಗೆ ದ್ಯೆಹಿಕ ನ್ಯೂನ್ಯತೆ ಮಾನದಂಡವಲ್ಲ, ಸಾಧಿಸುವ ಛಲ ಹಾಗೂ ಇಚ್ಛಾಶಕ್ತಿಯನ್ನು ಮ್ಯೆಗೂಡಿಸಿಕೊಂಡಲ್ಲಿ ಬದುಕಿನಲ್ಲಿ ಅತ್ಯುನ್ನತ ಸಾಧನೆ ಮಾಡಬಹುದೆಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡರು. ಮುಖ್ಯಗುರುಗಳಾದ ರಮೇಶ್ ಎಸ್.ರವರು ವಿಶೇಷ ಚೇತನವುಳ್ಳ ವ್ಯಕ್ತಿಗಳನ್ನು ಕೀಳಾಗಿ ಕಾಣದೆ ಗೌರವದಿಂದ ನಡೆದುಕೊಳ್ಳುವಂತೆ ಮನವರಿಕೆ ಮಾಡಿದರು.













