ನಾಳೆ (ಜೂ.24): ಬೊಳುವಾರಿನಲ್ಲಿ ಉಚಿತ ಕಣ್ಣು ಪರೀಕ್ಷೆ ಮತ್ತು ವೈದ್ಯಕೀಯ ಶಿಬಿರ

0

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ (ರಿ) ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಸಹಯೋಗದಲ್ಲಿ ಬೊಳುವಾರಿನಲ್ಲಿ ಉಚಿತ ಕಣ್ಣು ಪರೀಕ್ಷೆ ಮತ್ತು ವೈದ್ಯಕೀಯ ಶಿಬಿರವನ್ನು ಜೂ.24ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಹಮ್ಮಿಕೊಳ್ಳಲಾಗಿದೆ.

ಬೊಳುವಾರು ಯೂನಿಯನ್ ಬ್ಯಾಂಕ್ ಎದುರುಗಡೆಯ ಫಿಯೋನಿಕ್ಸ್ ಕ್ಲಿನಿಕ್ ನಲ್ಲಿ ನಡೆಯಲಿದೆ. ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧಿ ವಿತರಣೆ, ಉಚಿತ ಬಿಪಿ ಹಾಗೂ ಶುಗರ್ ಪರೀಕ್ಷೆ ನಡೆಯಲಿದೆ. ಹೋಮಿಯೋಪತಿ ವೈದ್ಯಕೀಯ ಸೇವೆಯೂ ಲಭ್ಯವಿರುತ್ತದೆ.ಸಾರ್ವಜನಿಕರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.ನೋಂದಣಿಗಾಗಿ ಸಂಪರ್ಕಿಸಿ: 9448474421

LEAVE A REPLY

Please enter your comment!
Please enter your name here