ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ

0

ಪುತ್ತೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆಯನ್ನು ಜೂನ್ 23ರಂದು ಆಚರಿಸಲಾಯಿತು.

ಬೆಳ್ಳಾರೆ ಠಾಣಾಧಿಕಾರಿ ಹೀರಯ್ಯ ಎಚ್.ಡಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಗಾಂಜಾ, ಅಫೀಮು, ಮೊಬೈಲ್ ದುರ್ಬಳಕೆ, ಸೈಬರ್ ಕ್ರೈಂ, ಅಪ್ರಾಪ್ತರ ವಾಹನ ಚಾಲನೆ ಮೊದಲಾದವುಗಳ ಕುರಿತು ಕಾನೂನು ಮಾಹಿತಿ ನೀಡಿದರು.

ಸುತ್ತಮುತ್ತ ನಡೆಯುತ್ತಿರುವ ಮಾದಕ ವಸ್ತುಗಳ ಚಟುವಟಿಕೆಗಳ ಬಗ್ಗೆ ತಿಳಿಸಿ, ಯಾವುದೇ ಕಾರಣಕ್ಕೂ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. “ವಿದ್ಯಾರ್ಥಿಗಳು ದೇಶದ ಭವಿಷ್ಯದ ಆಸ್ತಿ. ಈ ವಯಸ್ಸಿನಲ್ಲಿ ಗೆಳೆಯರ ಆಯ್ಕೆ ಬಹು ಮುಖ್ಯ. ಒಳ್ಳೆಯ ಆಲೋಚನೆಗಳನ್ನು ಈಗ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಹಂತಕ್ಕೆ ತಲುಪುತ್ತೀರಿ” ಎಂದು ಹಿತನುಡಿದರು.

ಅಧ್ಯಕ್ಷತೆ ವಹಿಸಿದ್ದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಮಾತನಾಡಿ, “ಭವಿಷ್ಯದ ಸದೃಢ ಬದುಕಿಗೆ ಓದು, ವಿದ್ಯಾಭ್ಯಾಸಕ್ಕಿಂತ ಸರಳ ದಾರಿ ಬೇರೊಂದಿಲ್ಲ. ದುರ್ವ್ಯಸನಗಳಿಗೆ ಬಲಿಯಾಗದೆ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವುದೇ ಯಶಸ್ವಿ ಬದುಕಿಗೆ ದಾರಿ” ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶಶಿಕಲಾ ಎಸ್ ಆಳ್ವ ಉಪಸ್ಥಿತರಿದ್ದರು.ದ್ವಿತೀಯ ಪಿಯು ವಿದ್ಯಾರ್ಥಿನಿ ಆಯಿಷತ್ ಹನ್ನಾ ಕಾರ್ಯಕ್ರಮ ನಿರೂಪಿಸಿದರು. ಹತ್ತನೇ ತರಗತಿಯ ಶಂತನುಕೃಷ್ಣ ಕೆ.ಎ ಸ್ವಾಗತಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿನಿ ಹೆಚ್.ಎಸ್. ಶ್ರುತ ಜೈನ್ ವಂದಿಸಿದರು. ದೇಚಮ್ಮ ಮತ್ತು ಬಳಗದವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here