ಪುತ್ತೂರು: ಅನ್ನಪೂರ್ಣ ಕ್ಯಾಂಟೀನ್ ಶುಭಾರಂಭ

0

ಪುತ್ತೂರು: ಸಸ್ಯಹಾರಿ ಮತ್ತು ಮಾಂಸಹಾರಿ ಊಟ, ಉಪಾಹಾರ ಮಂದಿರ ಅನ್ನಪೂರ್ಣ ಕ್ಯಾಂಟೀನ್ ಜೂ.19ರಂದು ದರ್ಬೆ ಸನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.


ಮಾಲಕರ ತಂದೆ ಮೋನಪ್ಪ ತಾಯಿ ಗೋಪಿ ದೀಪ ಬೆಳಗಿಸಿ, ಉದ್ಘಾಟಿಸಿದರು. ಕೆಮ್ಮಿಂಜೆ ದೇವಸ್ಥಾನದ ಅರ್ಚಕ ವೇ.ಮೂ ಕೃಷ್ಣ ಕಲ್ಲೂರಾಯ ಪೂಜಾ ವಿಧಿ ವಿಧಾನ ನೆರವೇರಿಸಿದರು. ಮಾಲಕರ ಪತ್ನಿ ಮಹಾಲಕ್ಷ್ಮಿ, ಸಹೋದರರಾದ ಜಯೇಶ್, ಆದರ್ಶ್, ಯತೀಶ್, ನಾದಿನಿ ಶರಣ್ಯ ಜಯೇಶ್, ಚಿರಸ್ವೀ ಸುವರ್ಣ, ಹಿತೈಷಿ ಶ್ರೀಧರ ನಾಯ್ಕ್, ಸಿಬ್ಬಂದಿ ಜಗದೀಶ್ ಉಪಸ್ಥಿತರಿದ್ದರು. ಮ್ಹಾಲಕ ಮಹೇಶ್ ಪೂಜಾರಿ ಸ್ವಾಗತಿಸಿ, ‌ನಮ್ಮಲ್ಲಿ ಸಸ್ಯಹಾರಿ, ಮಾಂಸಾಹಾರಿ ಊಟ, ಉಪಹಾರ, ಫಾಸ್ಟ್ ಫುಡ್, ಸೌತ್ ಇಂಡಿಯನ್ ಫಾಸ್ಟ್ ಫುಡ್ ಗಳು ಲಭ್ಯವಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here