ಪುತ್ತೂರು: ಮಾದಕ ದ್ರವ್ಯ ವಿರೋಧಿ ದಿನಾಚರಣೆ – 642 ಮಂದಿಯಿಂದ 5ಕೆ ಮ್ಯಾರಥಾನ್

0

ಪುತ್ತೂರು: ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಜನಜಾಗೃತಿ ಮೂಡಿಸಲು ಜೂ.26ರಂದು ಬೆಳಗ್ಗೆ ಪುತ್ತೂರಿನಲ್ಲಿ ‘ಫಿಟ್ ಇಂಡಿಯಾ ಮಾದಕ ದ್ರವ್ಯ ಮುಕ್ತ 5ಕೆ ಮ್ಯಾರಥಾನ್’ ಯಶಸ್ವಿಯಾಗಿ ನಡೆಯಿತು.

ವಿವಿಧ ವಿಭಾಗಗಳಲ್ಲಿ ಸುಮಾರು 642 ಮಂದಿ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪುತ್ತೂರಿನ ಎಲ್ಲಾ ರೋಟರಿ ಸಂಸ್ಥೆಗಳು, ಲಯನ್ಸ್ ಕ್ಲಬ್‌ಗಳು, ಇನ್ನರ್ ವೀಲ್ ಕ್ಲಬ್, ರೋಟರಾಕ್ಟ್ ಕ್ಲಬ್, ಜೆಸಿಐ ಸಂಸ್ಥೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಭಾರತ್ ಸ್ಕೌಟ್ಸ್ & ಗೈಡ್ಸ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ವಿವಿಧ ಸಾಮಾಜಿಕ ಮತ್ತು ಸೇವಾ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 5 ದಿನಗಳಿಂದ ವಿವಿಧ ಜನಜಾಗೃತಿ ಅಭಿಯಾನಗಳು ನಡೆದಿದ್ದವು. ಅದರ ಸಮಾರೋಪದ ಅಂಗವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here