







ಮೇನಾಲ: ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಪೂರ್ವ ಪ್ರಾಥಮಿಕ (ಎಲ್ಕೆಜಿ/ಯುಕೆಜಿ) ತರಗತಿಗಳನ್ನು ಆರಂಭಿಸಲಾಗಿದೆ.


ನೂತನ ತರಗತಿಗಳನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಿನಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.



ಇದೇ ಸಂದರ್ಭದಲ್ಲಿ ಉದ್ಯಮಿ ಶ್ರೀ ಕೃಷ್ಣ ಪ್ರಸಾದ್ ಅವರು ಕೆಜಿ ತರಗತಿಗಳ ಮಕ್ಕಳಿಗಾಗಿ ಸುಮಾರು 10 ಸಾವಿರ ರೂ. ಮೌಲ್ಯದ ಆಟಿಕೆಗಳನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ಲಾ ಮೆಣಸಿನಕಾನ ಹಾಗೂ ಸರ್ವ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪಂಚೋಡಿ, ಕಾರ್ಯಾಧ್ಯಕ್ಷ ರಾಮ ಮೇನಾಲ, ಪಂಚಾಯತ್ ನಿಕಟಪೂರ್ವ ಸದಸ್ಯರಾದ ವೆಂಕಪ್ಪ ನಾಯ್ಕ, ಶಶಿಕಲಾ, ಲಯನ್ಸ್ ಸಂಸ್ಥೆಯ ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಶಾಲೆಗೆ ಹೆಜ್ಜೆ ಇಟ್ಟ ಪುಟಾಣಿ ಮಕ್ಕಳನ್ನು ಆರತಿ ಬೆಳಗಿ, ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು.ಶಿಕ್ಷಕಿ ವಂದಿತಾ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ಎ. ಸ್ವಾಗತಿಸಿದರು. ವಾಣಿ ವಂದಿಸಿದರು. ಶಿಕ್ಷಕಿಯರಾದ ಆಶಾಲತಾ ಎ., ಲತಾ ಬಿ. ಮತ್ತು ಸೌಮ್ಯ ಸಹಕರಿಸಿದರು.










