






ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿಶ್ವ ಯೋಗದಿನದ ಅಂಗವಾಗಿ ಯೋಗ ದಿನಾಚರಣೆಯನ್ನು, ಸಂಸ್ಥೆಯ ನೇತಾಜಿ ಸಭಾಭವನದಲ್ಲಿ ಆಯೋಜಿಸಲಾಯಿತು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಮಿತಿಯ ಸದಸ್ಯರಾದ ಪ್ರೀತಿ ಶೆಣೈ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಯೋಗವನ್ನು ನಿತ್ಯ ಜೀವನದಲ್ಲಿ ಅವಿಭಾಜ್ಯ ಅಂಗದಂತೆ ಅಳವಡಿಸಿಕೊಂಡು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಆರೋಗ್ಯ ಭಾಗ್ಯ ಸಿಗುವುದು ಹಾಗೂ ಯೋಗವು ಆತ್ಮ ಸಾಕ್ಷಾತ್ಕಾರದತ್ತ ಸಾಗುವ ಒಂದು ಉತ್ತಮ ಮಾರ್ಗವಾಗಿದೆ ಎಂದರು.



ಯೋಗ ಪ್ರಮುಖ್ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (SPYSS)ಯ ಸದಸ್ಯರಾದ ಹರಿಶ್ಚಂದ್ರ ಹಾಗೂ ಹೇಮಚಂದ್ರ ಅವರ ನೇತೃತ್ವದಲ್ಲಿ ಹಲವು ಯೋಗದ ಆಸನಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಯಿತು.
ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅಭಿಜ್ಞಾ ಸ್ವಾಗತಿಸಿ, ಮಲೈಕಾ ನಿರೂಪಿಸಿ ವಿಧಾತ್ರಿ ವಂದಿಸಿದರು. ಶಾಲಾ ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರ ಉಪಸ್ಥಿತಿಯಲ್ಲಿ, ಚಿತ್ರಕಲಾ ಶಿಕ್ಷಕರಾದ ರಮೇಶ್.ಕೆ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ಯಾಮಲಾ ಜಿ. ಎನ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ನಡೆಯಿತು.









