ಶಿವಸದನದಲ್ಲಿ ಜನ್ಮದಿನದ ಭಜನಾ ಸಂಭ್ರಮ

0

ಪುತ್ತೂರು: ಮುರದಲ್ಲಿರುವ ‘ಶಿವಸದನ’ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಮಗಳು ಕು. ನಿಖಿತಾ ರಾವ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಐಕ್ಯೂವಿಐಎ ಕಂಪನಿಯ ನಿವೃತ್ತ ಡೈರೆಕ್ಟರ್ ನಿಶಾಂತ್ ರಾವ್ ಅವರು ಸೋಮವಾರ ವಿಶೇಷ ಭೋಜನ ಪ್ರಾಯೋಜಿಸಿದರು.

ಶಿವಸದನ ಕಟ್ಟಡದ ಎರಡು ಮಹಡಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಸಹಕರಿಸಿರುವ ನಿಶಾಂತ್ ರಾವ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಜೂ.22ರಂದು ವಿಶೇಷ ಭೋಜನದ ವ್ಯವಸ್ಥೆ ಮಾಡಿದರು.ಸಣ್ಣ ವಯಸ್ಸಿನಲ್ಲೇ ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಿರುವ ಕು. ನಿಖಿತಾಳಿಗೆ ಸಂತೋಷ, ಆರೋಗ್ಯ, ಆಯುಸ್ಸು, ವಿದ್ಯೆಯಲ್ಲಿ ಪ್ರಗತಿ ಸಿಗಲಿ ಎಂದು ಹಿರಿಯ ನಿವಾಸಿಗಳು ಆಶೀರ್ವದಿಸಿ ಶುಭ ಹಾರೈಸಿದರು.

ಈ ವೇಳೆ ಟ್ರಸ್ಟ್ ಸದಸ್ಯೆ ವನಿತಾ ರಾವ್ ಅವರು ಮಿತ್ರ ಸಮಾಜ ಭಜನಾ ಮಂಡಳಿ, ಪುತ್ತೂರು ಸದಸ್ಯರೊಂದಿಗೆ ಭಕ್ತಿ-ಭಾವದಿಂದ ಭಜನೆ ಹಾಡಿ ಹಿರಿಯರನ್ನು ರಂಜಿಸಿದರು. ಬಳಿಕ ವಿಶೇಷ ಚೇತನ ಮಕ್ಕಳು ಆರೋಗ್ಯ ಮತ್ತು ಆತ್ಮವಿಶ್ವಾಸದ ಮಹತ್ವ ಸಾರುವ ಯೋಗ ಪ್ರಾತ್ಯಕ್ಷಿತೆ ಪ್ರದರ್ಶಿಸಿದರು. ಶಿಕ್ಷಕಿಯರ ಮಾರ್ಗದರ್ಶನ ಇದಕ್ಕೆ ಪೂರಕವಾಗಿತ್ತು.ಟ್ರಸ್ಟ್ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರು. ಕೋಶಾಧಿಕಾರಿ ದಿನಕರ್ ರಾವ್ ಅವರು ಕು. ನಿಖಿತಾಳ ಬಗ್ಗೆ ಮಾತನಾಡಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಕಾರ್ಯದರ್ಶಿ ಕರುಣ್ ಬೆಳ್ಳೆ ನೇತೃತ್ವದಲ್ಲಿ, ಸದಸ್ಯ ಸಂತೋಷ್ ರಾವ್ ಉಜ್ಜೋಡಿ, ಡಾ. ಜಯಲಕ್ಷ್ಮಿ, ಹಿರಿಯರು, ಶಿಕ್ಷಕಿಯರು ಹಾಗೂ ಮ್ಯಾನೇಜರ್ ಸಹಕಾರದೊಂದಿಗೆ ಸಹಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here