ವಿಟ್ಲದ ಹಿರಿಯ ಉದ್ಯಮಿ ವೆಂಕಟೇಶ್ ಭಟ್ ನಿಧನ

0

ವಿಟ್ಲ: ಇಲ್ಲಿನ ಹೆಸರಾಂತ ಜನತಾ ಪವ‌ರ್ ಪ್ರೆಸ್ ಮಾಲಿಕ, ಹಿರಿಯ ಉದ್ಯಮಿ ವೆಂಕಟೇಶ್ ಭಟ್ (88 ವ.)ರವರು ವಯೋಸಹಜ ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಕೇರಳದ ಕುಂಬಳೆ ಸಮೀಪದ ಗದ್ದೆಮಠ ನಿವಾಸಿಯಾಗಿದ್ದ ವೆಂಕಟೇಶ್ ಭಟ್ ರವರು 1956ರಲ್ಲಿ ವಿಟ್ಲದ ಮುಖ್ಯರಸ್ತೆಯಲ್ಲಿ ‘ಜನತಾ ಬುಕ್ ಸ್ಟಾಲ್’ ಎಂಬ ಅಂಗಡಿ ತೆರೆಯುವ ಮೂಲಕ ತಮ್ಮ ಉದ್ಯಮ ಜೀವನ ಆರಂಭಿಸಿದರು. ವಿಟ್ಲ ಸುತ್ತಮುತ್ತಲ ಶೈಕ್ಷಣಿಕ ಸಂಸ್ಥೆಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಜನತಾ ಬುಕ್ ಸ್ಟಾಲ್ ಆಸರೆಯಾಗಿತ್ತು.

ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಒತ್ತಾಯದ ಮೇರೆಗೆ 1962ರಲ್ಲಿ ‘ಜನತಾ ಪವರ್ ಪ್ರೆಸ್’ ಎಂಬ ಮುದ್ರಣಾಲಯವನ್ನು ಸ್ಥಾಪಿಸಿದರು. ಮೊಳೆ ಜೋಡಿಸುವ ಕಾಲದಲ್ಲಿಯೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ ಖ್ಯಾತಿ ಇವರದ್ದಾಗಿತ್ತು.

ಅಚ್ಚುಕಟ್ಟಾದ ಶುದ್ಧ ಕನ್ನಡ ಭಾಷೆ ಹಾಗೂ ತಪ್ಪು ರಹಿತ ಬರವಣಿಗೆಗೆ ಹೆಸರುವಾಸಿಯಾಗಿದ್ದ ‘ಜನತಾ ಪವ‌ರ್ ಪ್ರೆಸ್’ ಇಂದಿಗೂ ಜಿಲ್ಲೆಯಾದ್ಯಂತ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಇದು ವೆಂಕಟೇಶ್ ಭಟ್ ಅವರ ಬದ್ಧತೆ ಹಾಗೂ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here