ಜೂ.28 ಬ್ಲಾಕ್ ಕಾಂಗ್ರೆಸ್‌ನಿಂದ ಎಸ್‌ಐಆರ್ ಬಗ್ಗೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಸಮಿತಿ ಪುತ್ತೂರು ಇದರ ವತಿಯಿಂದ ಎಸ್‌ಐಆರ್ ಕುರಿತ ಅಂತಿಮ ಮತ್ತು ಸಮಗ್ರ ಮಾಹಿತಿ ಕಾರ್ಯಗಾರ ಜೂ.28ರಂದು ಬೆಳಿಗ್ಗೆ ಎಪಿಎಂಸಿ ರೈತ ಸಭಾಂಗಣದಲ್ಲಿ ನಡೆಯಲಿದೆ.


ಖ್ಯಾತ ತರಬೇತುದಾರರಾಗಿರುವ ಬೆಂಗಳೂರಿನ ಅಮಿತ ಮತ್ತು ತಂಡ ಆಗಮಿಸಿ, ತರಬೇತಿ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವು ಮಂದಿ ಪಕ್ಷದ ನಾಯಕರುಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.


ಕಾಂಗ್ರೆಸ್ ಪಕ್ಷದ ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಉಸ್ತುವಾರಿಗಳು, ಗ್ರಾ.ಪಂ, ತಾ.ಪಂ., ಜಿ.ಪಂ ಮಾಜಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಮುಂಚೂಣಿ ಘಟಕದ ವಿವಿಧ ನಾಯಕರುಗಳು, ಬೂತ್ ಲೆವೆಲ್ ಏಜೆಂಟ್‌ಗಳು, ವಿವಿಧ ಘಟಕಗಳ ಮುಖಂಡರು ಕಡ್ಡಾಯವಾಗಿ, ಸಮಯಕ್ಕೆ ಸರಿಯಾಗಿ ಭಾಗವಹಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here