






ಪಾರದರ್ಶಕ ಸೇವೆ ಮಾಡಿದಾಗ ಕ್ಲಬ್ ಅಭಿವೃದ್ಧಿ-ಡಾ.ಗೀತಪ್ರಕಾಶ್


ಪುತ್ತೂರು: ಸಮಾಜದಲ್ಲಿ ನಾವು ಮಾಡುವ ಸೇವೆಯಲ್ಲಿ ಅರ್ಥಪೂರ್ಣತೆ ಇರಬೇಕು. ಸೇವೆ ಅಂದರೆ ಲಯನ್ಸ್. ಸಮಾಜದಲ್ಲಿ ಲಯನ್ಸ್ ಸಂಸ್ಥೆ ಬಹಳಷ್ಟು ಸಮಾಜಮುಖಿ ಸೇವೆ ನೀಡುತ್ತಿದೆ. ಸಮಾಜದಲ್ಲಿ ಗುರುತಿಸುವಿಕೆ ಆಗಬೇಕಾದರೆ ವಿನೂತನ ಸೇವೆ ಮಾಡಬೇಕು. ಅದರಲ್ಲೂ ಪಾರದರ್ಶಕ ಸೇವೆ ಮಾಡಿದಾಗ ಕ್ಲಬ್ ಅಭಿವೃದ್ಧಿಯಾಗಲಿದೆ ಎಂದು ಪಿಡಿಜಿ ಡಾ.ಗೀತಪ್ರಕಾಶ್ರವರು ಹೇಳಿದರು.




ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಜಿಲ್ಲೆ 317ಡಿ, ರೀಜ್ಹನ್ 7, ವಲಯ 2ರ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಹಾಗೂ ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ 2026-27ರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಿ ಮಾತನಾಡಿದರು.

ಲಯನ್ಸ್ ಪುತ್ತೂರ್ದ ಮುತ್ತು ಇಂದು ನಿರೀಕ್ಷೆಗೂ ಮೀರಿ ಬೆಳೆದಿದೆ-ಹೇಮನಾಥ ಶೆಟ್ಟಿ:
ಲಯನ್ಸ್ ಜಿಲ್ಲಾ ಅಂಬಾಸಿಡರ್ ಕಾವು ಹೇಮನಾಥ ಶೆಟ್ಟಿರವರು ಚಾರ್ಟರ್ನೈಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಕ್ಲಬ್ ನಗರದವರಿಗೆ, ಶ್ರೀಮಂತರಿಗೆ ಎಂಬ ಮಾತಿತ್ತು. ಆದರೆ ನಾವು ಲಯನ್ಸ್ ಕ್ಲಬ್ ಅನ್ನು ಗ್ರಾಮಾಂತರ ಪ್ರದೇಶದಲ್ಲಿ ರಚಿಸಿ ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಲಯನ್ಸ್ ಪುತ್ತೂರ್ದ ಮುತ್ತು ಇಂದು ನಿರೀಕ್ಷೆಗೂ ಮೀರಿ ಬೆಳೆದಿದೆ. ಸಂಘದಲ್ಲಿ ಸದಸ್ಯರನ್ನು ನಿರಂತರ ಉಳಿಸಿಕೊಳ್ಳುವಲ್ಲಿ ಯಾರೂ ಸಫಲರಾಗುತ್ತಾರೋ ಅವರೇ ನಿಜವಾದ ನಾಯಕ. ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಿದಾಗ ಅದರಲ್ಲಿ ಸಿಗುವ ಖುಶಿ ಬೇರೊಂದಿಲ್ಲ. ಪುತ್ತೂರಿನಲ್ಲಿ ಎಲ್ಲಾ ಲಯನ್ಸ್ ಕ್ಲಬ್ ಗಳು ಸಮಾಜಮುಖಿ ಚಟುವಟಿಕೆ ಮಾಡುವಲ್ಲಿ ಪೈಪೋಟಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಾಂತ್ಯದಲ್ಲಿಯೇ ಉತ್ತಮ ಕ್ಲಬ್ ಆಗಿ ಮುನ್ನೆಡೆಯಲಿ-ಸುದರ್ಶನ್ ಪಡಿಯಾರ್:
ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ಮಾತನಾಡಿ, ಆಡಳಿತಾತ್ಮಕ ಹಾಗೂ ಸೇವೆಯ ಯಾವುದೇ ಕಾರ್ಯಕ್ರಮವು ಲಯನ್ಸ್ ಉತ್ತಮ ಸೇವೆ ನೀಡುತ್ತಿದೆ. ಕಾವು ಹೇಮನಾಥ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದೊಂದಿಗೆ ಲಯನ್ಸ್ ಪುತ್ತೂರ್ದ ಮುತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಈ ಕ್ಲಬ್ ಸಮಾಜದಲ್ಲಿ ಮಾದರಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಇದು ಪ್ರಾಂತ್ಯದಲ್ಲಿಯೇ ಉತ್ತಮ ಕ್ಲಬ್ ಆಗಿ ಮುನ್ನೆಡೆಯಲಿ ಎಂದರು.
ಜಿಲ್ಲೆಯಲ್ಲಿ ನಂಬರ್ ವನ್ ಸ್ಥಾನ ಪಡೆಯಲಿ-ಆನಂದ ರೈ:
ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಆನಂದ ರೈ ಮಾತನಾಡಿ, ಹಿಂದಿನ ವರ್ಷದಲ್ಲಿ ವೇದಾವತಿ ರಾಜೇಶ್ರವರ ನೇತೃತ್ವದಲ್ಲಿ ಕ್ಲಬ್ ಉತ್ತಮವಾಗಿ ಸೇವೆ ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಅದೇ ರೀತಿ ಈ ವರ್ಷವೂ ರವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಕ್ಲಬ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆಯಲಿ ಎಂದರು.
ನಮ್ಮ ಕ್ಲಬ್ ೪ನೇ ಸ್ಥಾನದಲ್ಲಿ ಶ್ಲಾಘನೀಯ-ವೇದಾವತಿ ರಾಜೇಶ್:
ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವೇದಾವತಿ ರಾಜೇಶ್ ಮಾತನಾಡಿ, ಎರಡು ವರ್ಷ ಲಯನ್ಸ್ ಪುತ್ತೂರ್ದ ಮುತ್ತು ಅಧ್ಯಕ್ಷೆಯಾಗಿ ಸಾಧನೆ ಮಾಡಲು ನನಗೆ ಕಾವು ಹೇಮನಾಥ ಶೆಟ್ಟಿ ಹಾಗೂ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಪೈ, ಪದಾಧಿಕಾರಿಗಳು, ಸದಸ್ಯರ ಸಹಕಾರದಿಂದಾಗಿ ಆಗಿದೆ. ತನ್ನ ಅಧ್ಯಕ್ಷಾವಧಿಯ ಮೊದಲ ವರ್ಷ ಸಮಾಜಮುಖಿ ಸೇವೆಗೆ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿತ್ತು, ಈಗ ೪ನೇ ಸ್ಥಾನಕ್ಕೆ ನೆಗೆದಿರುವುದು ಖುಶಿ ತಂದಿದೆ. ಸಮಾಜದಲ್ಲಿ ಸೇವೆ ಮಾಡುವುದು ನನ್ನ ಭಾಗ್ಯವಾಗಿದ್ದು ಮುಂದಿನ ದಿನಗಳಲ್ಲಿ ರವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಕ್ಲಬ್ ಪ್ರಥಮ ಸ್ಥಾನದಲ್ಲಿ ಮುಂದುವರೆಯಲಿ ಎಂದರು.
ಹೊಸ ಸದಸ್ಯರ ಸೇರ್ಪಡೆ:
ಕ್ಲಬ್ ನೂತನ ಸದಸ್ಯರುಗಳಾಗಿ ಸಿವಿಲ್ ಇಂಜಿನಿಯರ್ ಸಂದೇಶ್ ರೈ, ಕೃಷಿಕ ಗಂಗಾಧರ ಶೆಟ್ಟಿ ಎಲಿಕರವರುಗಳನ್ನು ಪಿಡಿಜಿ ಡಾ.ಗೀತಪ್ರಿಯರವರು ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಜಲೀಲ್ ಬೈತ್ತಡ್ಕರವರು ನೂತನ ಸದಸ್ಯರ ಪರಿಚಯ ಮಾಡಿದರು.
ಸೇವಾ ಚಟುವಟಿಕೆಗಳು:
ಕ್ಲಬ್ ಸೇವಾ ಚಟುವಟಿಕೆಯಡಿಯಲ್ಲಿ ಕ್ಲಬ್ ಮಾಜಿ ಕಾರ್ಯದರ್ಶಿ ಭಾಗ್ಯೇಶ್ ರೈರವರ ಪ್ರಾಯೋಜಕತ್ವದಲ್ಲಿ ಈರ್ವರು ವಿದ್ಯಾರ್ಥಿನಿಯರಾದ ಲಿಖಿತಾ ಎಂ ಹಾಗೂ ಭವಿಷ್ಯ ಆರ್ ರವರ ವಿದ್ಯಾಭ್ಯಾಸಕ್ಕೆ ದೇಣಿಗೆ ನೀಡಲಾಯಿತು.
ನೂತನ ಕಾರ್ಯದರ್ಶಿ ಅನಸೂಯಾ ಬಾರವರು ಅಧ್ಯಕ್ಷೆ ವೇದಾವತಿ ರಾಜೇಶ್ ರವರಿಗೆ ಕಾಲರ್ ತೊಡಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಲಯನ್ಸ್ ವಲಯಾಧ್ಯಕ್ಷೆ ಜೆಸಿಂತಾ ಮಸ್ಕರೇನ್ಹಸ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ಲಿಯೋ ಅಧ್ಯಕ್ಷ ಅಮೃತ್ ಪಿ.ಜೆ, ಕಾರ್ಯದರ್ಶಿ ತೃಷಾ, ನಿಕಟಪೂರ್ವ ಅಧ್ಯಕ್ಷ ಚಿಂತನ್ ಸಾಲ್ಯಾನ್, ನಿಕಟಪೂರ್ವ ಕಾರ್ಯದರ್ಶಿ ಶ್ರೀಶ ಎನ್.ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಯಾನಂದ ರೈ ಕೋರ್ಮಂಡ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ರವೀಂದ್ರ ಪೈರವರು ಧ್ವಜವಂದನೆಯನ್ನು, ಪ್ರಭಾಕರ್ ಜಿ.ರವರು ಲಯನ್ಸ್ ನೀತಿ ಸಂಹಿತೆಯನ್ನು ಓದಿದರು. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವೇದಾವತಿ ರಾಜೇಶ್ ಸ್ವಾಗತಿಸಿ, ನೂತನ ಕೋಶಾಧಿಕಾರಿ ಸುಪ್ರೀತ್ ಕಣ್ಣಾರಾಯ ವಂದಿಸಿದರು. ಪ್ರತಿಮಾ ಯು.ರೈ ಪದ ಪ್ರದಾನ ಅಧಿಕಾರಿಯ, ಉಷಾಕಿರಣರವರು ಚಾರ್ಟರ್ ನೈಟ್ ಮುಖ್ಯ ಅತಿಥಿಯ, ಚಂದ್ರಶೇಖರ್ ರವರು ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು.
ಜವಾಬ್ದಾರಿ, ಸದಸ್ಯರ ಸಹಕಾರದೊಂದಿಗೆ ಕ್ಲಬ್ ಯಶಸ್ವಿಯತ್ತ..
ಗುರುಹಿರಿಯರ ಆಶೀರ್ವಾದದಿಂದ ಲಯನ್ಸ್ ಅಧ್ಯಕ್ಷನಾಗಿದ್ದೇನೆ. ಅಧ್ಯಕ್ಷ ಜವಾಬ್ದಾರಿಯ ಜೊತೆಗೆ ಕ್ಲಬ್ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಕ್ಲಬ್ ಅನ್ನು ಸಾಧ್ಯವಾದಷ್ಟು ಮುನ್ನೆಡೆಸಲು ಪ್ರಯತ್ನ ಮಾಡುತ್ತೇನೆ. ಕ್ಲಬ್ ಮಾರ್ಗದರ್ಶಕರಾದ ಕಾವು ಹೇಮನಾಥ ಶೆಟ್ಟಿರವರು ಕ್ಲಬ್ ಗೆ ಹಿಂದಿನಿಂದಲೂ ಸಹಕಾರ ನೀಡುತ್ತಾ ಬಂದಿರುವುದು ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲೂ ಅವರ ಸಹಕಾರ ಬಯಸುತ್ತೇನೆ.ಸ್ಥಾಪಕ ಅಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನಸ್, ಪೂರ್ವಾಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಳ, ರವೀಂದ್ರ ಪೈ, ನಿರ್ಗಮಿತ ಅಧ್ಯಕ್ಷೆ ವೇದಾವತಿ ರಾಜೇಶ್ ರವರು ಉತ್ತಮ ರೀತಿಯಲ್ಲಿ ಕ್ಲಬ್ ಮುನ್ನೆಡೆಸಿದ ರೀತಿಯಲ್ಲಿಯೇ ನಾವೂ ಮುಂದುವರಿಯಬೇಕಾಗಿದೆ.
-ರವಿಪ್ರಸಾದ್ ಶೆಟ್ಟಿ, ನೂತನ ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು
ಸನ್ಮಾನ..
ಈ ಸಂದರ್ಭದಲ್ಲಿ ಪದ ಪ್ರದಾನ ಅಧಿಕಾರಿ ಪಿಡಿಜಿ ಡಾ.ಗೀತಪ್ರಕಾಶ್, ಚಾರ್ಟರ್ ನೈಟ್ ಮುಖ್ಯ ಅತಿಥಿ ಕಾವು ಹೇಮನಾಥ ಶೆಟ್ಟಿ, ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವೇದಾವತಿ ರಾಜೇಶ್, ಕಾರ್ಯದರ್ಶಿ ಅನಸೂಯಾ ಬಾಯೈ, ಕೋಶಾಧಿಕಾರಿ ಸುಪ್ರೀತ್ ಕಣ್ಣಾರಾಯರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳ ಪದ ಪ್ರದಾನ..
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಕಾರ್ಯದರ್ಶಿ ಸುಪ್ರೀತ್ ಬಿ.ಬಿ, ಕೋಶಾಧಿಕಾರಿ ಅನಸೂಯ ಬಾ ಟಿ, ಪ್ರಥಮ ಉಪಾಧ್ಯಕ್ಷ ದಯಾನಂದ ರೈ ಕೋರ್ಮಂಡ, ದ್ವಿತೀಯ ಉಪಾಧ್ಯಕ್ಷ ಜಲೀಲ್ ಬೈತಡ್ಕ, ತೃತೀಯ ಉಪಾಧ್ಯಕ್ಷ ವಾಣಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ವೇದಾವತಿ ರಾಜೇಶ್, ಚೀಫ್ ಎಡ್ವೈಸರ್ ಅಬೂಬಕ್ಕರ್ ಮುಲಾರ್, ಎಲ್ಸಿಐಎಫ್ ಕೋ-ಆರ್ಡಿನೇಟರ್ ಲ್ಯಾನ್ಸಿ ಮಸ್ಕರೇನ್ಹಸ್, ಸರ್ವಿಸ್ ಚೇರ್ಪರ್ಸನ್ ಪ್ರತಿಮಾ ಯು ರೈ, ಕ್ಲಬ್ ಆಡಳಿತಾಧಿಕಾರಿ ಅನಿಲ್ ಮಸ್ಕರೇನ್ಹಸ್, ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ ಶ್ರವಣ್ ನಾಕ್, ಕ್ಲಬ್ ಪಿಆರ್ಒ ಚಂದ್ರಶೇಖರ್ ಪಿ, ಕ್ಲಬ್ ಮಾರ್ಕೆಟಿಂಗ್ ಮತ್ತು ಕೋ-ಆರ್ಡಿನೇಟರ್ ಮೊಹಮ್ಮದ್ ಕುಕ್ಕುವಳ್ಳಿ, ಮೆಂಬರ್ಶಿಪ್ ಚೇರ್ಪರ್ಸನ್ ವತ್ಸಲ ಪಿ.ಶೆಟ್ಟಿ, ಕ್ಲಬ್ ಟೇಮರ್ ಗಂಗಾಧರ್ ಶೆಟ್ಟಿ, ಕ್ಲಬ್ ಟೇಲ್ ಟ್ವಿಸ್ಟರ್ ಯಶುಭ ರೈ, ನಿರ್ದೇಶಕರುಗದ ಪ್ರಭಾಕರ್ ಜಿ, ಮೀನಾಕ್ಷಿ ಆರ್, ಭಾಗ್ಯೇಶ್ ರೈ, ರವೀಂದ್ರ ಪೈ ಎನ್, ಮೀನಾಕ್ಷಿ ಎಸ್, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ನೂತನ ಅಧ್ಯಕ್ಷ ಅಮೃತ್ ಪಿ.ಜೆ, ಕಾರ್ಯದರ್ಶಿ ತೃಷಾ, ಕೋಶಾಧಿಕಾರಿ ದಿಶನ್, ಪ್ರಥಮ ಉಪಾಧ್ಯಕ್ಷ ಶ್ರೀಶ ಎನ್.ನಾಯಕ್, ದ್ವಿತೀಯ ಉಪಾಧ್ಯಕ್ಷ ಕಶಿಶ್, ನಿಕಟಪೂರ್ವ ಅಧ್ಯಕ್ಷ ಚಿಂತನ್ ಸಾಲ್ಯಾನ್, ಮೆಂಬರ್ಶಿಪ್ ಚೇರ್ಪರ್ಸನ್ ಕೆ.ವಿಧಿಕ್ಷಾ ನಾಯಕ್, ಸರ್ವಿಸ್ ಚೇರ್ಪರ್ಸನ್ ಆಗಿ ತುಶಾರ್ ಗೌಡರವರಿಗೆ ಪದ ಪ್ರದಾನ ಅಧಿಕಾರಿ ಪದ ಪ್ರದಾನವನ್ನು ನೆರವೇರಿಸಿದರು.










