ಎಸ್‌ಐಆರ್ ಮಾಹಿತಿ ಕಾರ್ಯಾಗಾರ

0

ಎಸ್‌ಐಆರ್ ಮೂಲಕ ಮತಾಧಿಕರದ ಹರಣ : ನಿಸಾರ್ ಅಹ್ಮದ್

ಉಪ್ಪಿನಂಗಡಿ: ಸಂವಿಧಾನದ ಮೂಲಕ ಜಾತಿ ಮತಗಳ ಬೇಧವಿಲ್ಲದೆ, ಬಡವ- ಬಲ್ಲಿದನೆಂಬ ಬೇಧ ಮಾಡದೇ ಈ ದೇಶದ 18 ವರ್ಷ ಮೇಲ್ಪಟ್ಟ ಅರ್ಹರಿಗೆ ಮತದಾನದ ಹಕ್ಕನ್ನು ನೀಡಿರುವುದು ಕಾಂಗ್ರೆಸ್ ಸರಕಾರ. ಆದರೆ ಬಿಜೆಪಿ ಸರಕಾರವು ಚುನಾವಣಾ ಆಯೋಗದ ಮೂಲಕ ಎಸ್‌ಐಆರ್ ಜಾರಿಗೊಳಿಸುವ ಮೂಲಕ ಬಿಜೆಪಿಯೇತರರನ್ನು ಮತದಾನದಿಂದ ಹೊರಗಿಡಲು ಹುನ್ನಾರ ನಡೆಸಿದೆ. ಈಗ ಬಂದಿರುವ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ. ಅದು ಮತಾಧಿಕಾರದ ಹರಣ ಎಂದು ಜಾಗೃತ ಕರ್ನಾಟಕದ ಸದಸ್ಯ ನಿಸಾರ್ ಅಹ್ಮದ್ ಹೇಳಿದರು.


ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಜಂಟಿ ಆಶ್ರಯದಲ್ಲಿ ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿ ನಡೆದ ಸಾಮಾಜಿಕ ಮುಖಂಡರಿಗಾಗಿ ನಡೆದ ಎಸ್‌ಐಆರ್ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡುತ್ತಿದ್ದರು.


ನಮ್ಮೆಲ್ಲ ಹಕ್ಕುಗಳ ತಾಯಿಯು ಮತದಾನದ ಹಕ್ಕಾಗಿದೆ. ದೇಶದಲ್ಲಿ ಯಾರು ಆಡಳಿತ ನಡೆಸಬೇಕೆಂದು ನಿರ್ಧರಿಸುವುದು ಇದರಿಂದಲೇ. ಆದರೆ ಈಗ ಎಸ್‌ಐಆರ್‌ನ ಮೂಲಕ ಬಿಜೆಪಿಯೇತರರ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿದೆ. 2002ರಲ್ಲಿ ಮತದಾನದ ಪರಿಷ್ಕರಣೆ ನಡೆದಿತ್ತು. ಇಡಿ, ಸಿಬಿಐ, ಚುನಾವಣಾ ಆಯೋಗವನ್ನು ತನ್ನ ಅಂಗಸಂಸ್ಥೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯು ಇದೀಗ ಚುನಾವಣಾ ಆಯೋಗದ ಮೂಲಕ ಎಸ್‌ಐಆರ್‌ಗೆ ಮುಂದಾಗಿದೆ. ಇದರ ಹಿಂದಿರುವ ಹುನ್ನಾರ ಒಂದೇ ಸೋಲಿನ ಭೀತಿಯಿರುವ ಬಿಜೆಪಿಗೆ 2029ರಲ್ಲೂ ಅಧಿಕಾರಕ್ಕೆ ಬರಬೇಕು. ಬಿಜೆಪಿಯೇತರರನ್ನು ಮತದಾನದಿಂದ ಹೊರಗಿಡಬೇಕು. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ದಲಿತರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಆಗಿದೆ. ಪಶ್ಚಿಮ ಬಂಗಾಳ ರಾಜ್ಯದ ಚುನಾವಣೆಯಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದ ಸುಚಿತ್ರಾ ಗುಪ್ತಾರನ್ನು ಬಳಸಿಕೊಂಡು ಎಸ್‌ಐಆರ್ ನಡೆಸಿದ್ದ ಬಿಜೆಪಿ ಅಲ್ಲಿ ತನ್ನ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಅವರಿಗೆ ಸರಕಾರದ ಅಧಿಕೃತ ಸಲಹೆಗಾರನ ಹುದ್ದೆ ನೀಡುವ ಮೂಲಕ ಅವರ ಋಣ ಸಂದಾಯ ಮಾಡಿದೆ. ಆದ್ದರಿಂದ ಈ ಬಗ್ಗೆ ಕಾಂಗ್ರೆಸ್‌ನವರು ಎಚ್ಚೆತ್ತುಕೊಳ್ಳಬೇಕು. 2-3 ತಿಂಗಳು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ. 18 ವರ್ಷ ಪೂರ್ಣವಾದವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಎಸ್‌ಐಆರ್‌ನ ಸರಿಯಾದ ಮ್ಯಾಪಿಂಗ್ ಜೂ.30ರಿಂದ ಜು.29ರತನಕ ನಡೆಯಲಿದ್ದು, ಆ ಸಂದರ್ಭ ಮನೆಗೆ ಭೇಟಿ ನೀಡಿ ಫಾರಂ ನೀಡುವ ಬಿಎಲ್‌ಒಗಳಿಗೆ ಫಾರಂನಲ್ಲಿ ತಪ್ಪು ಇದ್ದರೆ ಸರಿಯಾದ ಮಾಹಿತಿಯನ್ನು ನೀಡಿ ತಿದ್ದುಪಡಿ ಮಾಡಿಸಬೇಕು. ಫಾರಂ ಅನ್ನು ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಬೇಕು. ಸರಿಯಾಗಿ ಫಾರಂ ಭರ್ತಿ ಮಾಡಿ ಕೊಡಬೇಕು ಎಂದರು.


ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಂಗ್ರೆಸ್‌ನ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್. ಮಹಮ್ಮದ್ ಅಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ವಲಯದ ಪ್ರಚಾರ ಸಮಿತಿಯ ಅಧ್ಯಕ್ಷ ಗಣೇಶ ರಾಜ್, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಗ್ರಾ.ಪಂ. ಮಾಜಿ ಸದಸ್ಯರಾದ ಗೀತಾ ದಾಸರಮೂಲೆ, ಸವಿತಾ ಹರೀಶ್, ಪ್ರಮುಖರಾದ ಅಝೀಝ್ ಬಸ್ತಿಕ್ಕಾರ್, ಅಶ್ರಫ್ ಬಸ್ತಿಕ್ಕಾರ್, ಯೊಗೀಶ್ ಸಾಮಾನಿ, ವಿಕ್ರಂ ಶೆಟ್ಟಿ ಅಂತರ, ಅಬ್ದುರ್ರಹ್ಮಾನ್ ಯುನಿಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here