ಕುದ್ಮಾರು ಶಾಲೆಯಲ್ಲಿ ರೀಡಿಂಗ್ ಮ್ಯಾರಥಾನ್ ಕಾರ್ಯಕ್ರಮ

0

ಗ್ರಂಥಾಲಯ ಜೀವನದ ಅತ್ಯಮೂಲ್ಯ ಭಾಗ- ಡಾ. ಮೀರಾಮಣಿ

ಕಾಣಿಯೂರು: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು ಬಳಸುವುದು ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ದೃಷ್ಟಿಯಿಂದ ರೀಡಿಂಗ್ ಮ್ಯಾರಥಾನ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಬೆಸ್ಟ್ ಗ್ರಂಥ ಪಾಲಕ ಪ್ರಶಸ್ತಿ ಪುರಸ್ಕೃತರು ಆಗಿರುವ ಬೆಂಗಳೂರಿನ ಜೈನ್ಡ್ ಟು ಬಿ ಯುನಿವರ್ಸಿಟಿಯ ಗ್ರಂಥಪಾಲಕರಾದ ಡಾ. ವೀರಾಮಣಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದುವ ರೀತಿ, ಆ ಪುಸ್ತಕದ ವಿಷಯಗಳನ್ನು ಗ್ರಹಿಸುವ ಹಾಗೂ ನೆನಪಿನಲ್ಲಿ ಇಟ್ಟುಕೊಳ್ಳುವ ವಿವಿಧ ತಂತ್ರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟರು.


ಓದುವ ಹವ್ಯಾಸಗಳ ಮೂಲಕ, ಪುಸ್ತಕಗಳಲ್ಲಿ ಇರುವ ಪ್ರಮುಖ ವಿಷಯಗಳನ್ನು ಬರೆದಿಟ್ಟುಕೊಳ್ಳುವ, ಹಾಗೂ ಒಳ್ಳೆಯ ಅಭ್ಯಾಸಗಳ ಬಗ್ಗೆ ದಿನಚರಿ ಬರೆಯುವ ಅಭ್ಯಾಸವನ್ನು ಬೆಳೆಸಿದರು.
ವಿದ್ಯಾರ್ಥಿಗಳಿಗೆ ಓದಿಗೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಿದರು.


ಗ್ರಂಥಾಲಯವು ವಿದ್ಯಾರ್ಥಿಗಳಿಂದ ಹೇಗೆ ನಿರ್ವಹಣೆ ಮಾಡಬಹುದು.. ವಿದ್ಯಾರ್ಥಿಗಳೇ ಇದನ್ನು ಇನ್ನಷ್ಟು ಉತ್ತಮವಾಗಿ ಹೇಗೆ ಜೋಡಿಸಲ್ಪಡಬಹುದು ಇದರ ಬಗ್ಗೆಯೂ ಮಾಹಿತಿ ನೀಡಿದರು. ತನ್ಮೂಲಕ ಗ್ರಂಥಾಲಯವು ನಮ್ಮ ಜೀವನದ ಅತ್ಯಮೂಲ್ಯ ಭಾಗವಾಗಿ ಅದನ್ನು ಬಳಸಿಕೊಳ್ಳುವಂತೆ ಹೇಳಿದರು.
ಶಾಲಾ ಶಿಕ್ಷಕರಿಂದ ವಿದ್ಯಾರ್ಥಿ ವೃಂದ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here