







ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯ ಮಟ್ಟದ ಮಾತೆಯರ ಒಕ್ಕೂಟದ ವಾರ್ಷಿಕ ಮಾತೃಸಂಗಮ ’ಫಿದೆಲಿಯುಂ-2026’ ಕಾರ್ಯಕ್ರಮ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಫಾ. ಜೋಬಿ ಪುಲ್ಲಾಟ್ ಅವರು ಮಾತನಾಡಿ, ಉತ್ತಮ ಸಮಾಜ ಮತ್ತು ಕುಟುಂಬ ನಿರ್ಮಾಣದಲ್ಲಿ ಮಾತೆಯರ ಧಾರ್ಮಿಕ ಹಾಗೂ ಮೌಲ್ಯಾಧಾರಿತ ಪಾತ್ರದ ಮಹತ್ವದ ಬಗ್ಗೆ ತಿಳಿಸಿ, ಮಕ್ಕಳ ಬೆಳವಣಿಗೆಯಲ್ಲಿ ಮಾತೆಯರು ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳನ್ನು ಸನ್ಮಾನಿಸಲಾಯಿತು.



ಕಾರ್ಯಕ್ರಮದಲ್ಲಿ ಫಾ. ರಿಜೊ ಒಡೋಪಲ್ಲಿ, ಸಿಸ್ಟರ್ ಲಿಸ್ ಮ್ಯಾಥ್ಯೂ ಎಸ್.ಎಚ್., ರೇಖಾ ಅಡ್ಡಹೊಳೆ, ಸಿಮಿ ಆರ್ಲ, ಸುಜಾ ಜೇಮ್ಸ್ ಹಾಗೂ ಫಾ. ಶಾಜಿ ಮ್ಯಾಥ್ಯೂ ವಿವಿಧ ವಿಚಾರಗಳನ್ನು ಮಂಡಿಸಿದರು. ಮಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆಲ್ಯಾಡಿ, ಆರ್ಲ, ಇಚಿಲಂಪಾಡಿ, ಉದನೆ, ಶಿರಾಡಿ, ಅಡ್ಡಹೊಳೆ ಹಾಗೂ ಅರಸಿನಮಕ್ಕಿ ಚರ್ಚ್ಗಳ ಮಾತೆಯರು ಭಾಗವಹಿಸಿದರು.










