







ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಒಡ್ಯ ಇಲ್ಲಿಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿಯ ಎಲ್ಲಾ ಪುಟಾಣಿಗಳಿಗೆ ವಿವೇಕ ಹೈಸ್ಕೂಲ್ ಬಳಗ -2002ಕೋಟ, ಉಡುಪಿ ಇವರ ವತಿಯಿಂದ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಜೂ.27ರಂದು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಗ್ರೂಪ್‌ನ ಮುಖ್ಯಸ್ಥ ಪ್ರವೀಣ್ ಶುಭ ಹಾರೈಸಿದರು.



ಶಾಲೆಯ ಮುಖ್ಯಗುರು ಜನಾರ್ದನ ಅಲ್ಚಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರೇಮ ಪಡ್ಯಂಬೆಟ್ಟು, ಮುಖ್ಯ ಅತಿಥಿ ಭರತ್ ಪಡುಬಿದ್ರಿ ಉಪಸ್ಥಿತರಿದ್ದರು. ಶಿಕ್ಷಕಿ ಸ್ವರ್ಣಲತಾ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ದಿವ್ಶಾ ಪಡುಬಿದ್ರಿ ವಂದಿಸಿದರು. ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.










