






ಪುತ್ತೂರು: ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಸಾಗಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡ ಇಲಾಖೆಯ ಅಧಿಕಾರಿಗಳಿಗೆ, ಭಾಗವಹಿಸಿದ ಮಂದಿಗೆ ಇಕ್ಬಾಲ್ ಬಾಳಿಲ ಅವರು ಬರೆದಿರುವ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿರುವ ರೂ. 425/-ಮುಖಬೆಲೆಯ “ಮಾದಕ ಮಾರಣಾಂತಿಕ” ಎಂಬ 125 ಪುಸ್ತಕವನ್ನು ಉಚಿತವಾಗಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ವತಿಯಿಂದ ವಿತರಿಸಲಾಯಿತು.




ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ ಜಿಲ್ಲಾ ಜಂಟಿ ಅಧೀಕ್ಷಕ ಅನಿಲ್ ಎಸ್ ಭೂಮಾರೆಡ್ಡಿ, ಡಿವೈಎಸ್ಪಿ ಪ್ರಮೋದ್ ಕುಮಾರ್ ಮತ್ತು ಬರಹಗಾರ ಇಕ್ಬಾಲ್ ಬಾಳಿಲ ರವರಿಗೆ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.




ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಬನ್ನೂರು, ಕ್ಲಬ್ ವಿಸ್ತರಣಾಧಿಕಾರಿ ಕಾವು ಹೇಮನಾಥ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತ್ ಕಣ್ಣರಾಯ, ಕೋಶಾಧಿಕಾರಿ ಅನಸೂಯಾ ಬಾಯಿ, ವಲಯಾಧ್ಯಕ್ಷೆ ವೇದಾವತಿ ರಾಜೇಶ್, ಹಿರಿಯ ಮಾರ್ಗದರ್ಶಕ ಅಬೂಬಕ್ಕರ್ ಮುಲಾರ್ ಮತ್ತಿತರರು ಉಪಸ್ಥಿತರಿದ್ದರು.










