






ಬಡಗನ್ನೂರು: ಮೇನಾಲ ಶ್ರೀ ನಂದಾ ದೀಪ ಜ್ಞಾನ ವಿಕಾಸ ಕೇಂದ್ರದ ಸಭೆ ಜೂ. 27ರಂದು ಮೇನಾಲ ಸ.ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನೇತ್ರ ಸ್ವಸಹಾಯ ಸಂಘದ ಸದಸ್ಯೆ ಮೀನಾಕ್ಷಿ ಭಾಸ್ಕರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಈಶ್ವರಮಂಗಲ ಹೊರಠಾಣಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಾಗರಾಜ್ ಅವರು ಮಹಿಳಾ ದೌರ್ಜನ್ಯ, ಪೋಕ್ಸೊ ಕಾಯಿದೆ ಹಾಗೂ ವರದಕ್ಷಿಣೆ ಕಿರುಕುಳ ಕುರಿತು ಕಾನೂನಿನ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.



ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯ ಅವರು ಕೇಂದ್ರಕ್ಕೆ ಒಳಪಟ್ಟ ಸಂಘಗಳ ಹಾಜರಾತಿ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಡೆದ ಆಕ್ಟಿವಿಟಿಯಲ್ಲಿ ವಿಜೇತರಾದ ಮೀನಾಕ್ಷಿ ಭಾಸ್ಕರ ರಾವ್ ಅವರಿಗೆ ಬಹುಮಾನ ವಿತರಿಸಲಾಯಿತು.ಸಭೆಯಲ್ಲಿ ಕೇಂದ್ರಕ್ಕೆ ನೂತನ ಸಂಯೋಜಕಿಯಾಗಿ ಶಾರದಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮೇನಾಲ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಂದರ್ ಜಿ ಸ್ವಾಗತಿಸಿ ವಂದಿಸಿದರು.










