ಕುಶಲ ಹಾಸ್ಯಪ್ರಿಯರ ಸಂಘದಲ್ಲಿ ನಗೆಹಬ್ಬ : ಪ್ರೊ. ವತ್ಸಲಾ ರಾಜ್ಞಿಯವರಿಂದ ಚಿಂತನ-ಮಂಥನ

0

ಪುತ್ತೂರು: ಜೀವನದಲ್ಲಿ ಯಾವುದೂ ಸ್ಥಿರವಲ್ಲ. ಸೋಲು-ಗೆಲುವು, ಕಷ್ಟ-ಸುಖ ಎಲ್ಲವೂ ಕ್ಷಣಿಕ. ಸದಾ ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕಿ ಪ್ರೊ. ವತ್ಸಲಾ ರಾಜ್ಞಿ ಕರೆ ನೀಡಿದರು.

ಇತ್ತೀಚೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ಕುಶಲ ಹಾಸ್ಯಪ್ರಿಯರ ಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರ ವಚನ ಹಾಗೂ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗಗಳನ್ನು ಉದಾಹರಿಸುತ್ತಾ, “ಅತ್ಯಂತ ಶ್ರೇಷ್ಠವಾದ ಈ ಮಾನವ ಜನ್ಮವನ್ನು ಪಡೆದ ನಾವು ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಭಗವಂತ ಮತ್ತು ಅಂತರಾತ್ಮ ಮೆಚ್ಚುವಂತೆ ಜೀವಿಸಬೇಕು” ಎಂದು ನುಡಿದರು.

ಕೆಲವು ಹಾಸ್ಯ ತುಣುಕುಗಳನ್ನು ಹೇಳಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ ಪ್ರೊ. ವತ್ಸಲಾ ಅವರು ಸಂಘದ ಚಟುವಟಿಕೆಗಳನ್ನು ಮೆಚ್ಚಿ ಶುಭ ಹಾರೈಸಿದರು. ಅತಿಥಿಗಳನ್ನು ಪುಸ್ತಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸತ್ಯೇಶ್ ಕೆದಿಲಾಯ, ಸದಸ್ಯರಾದ ಶಂಕರಿ ಶರ್ಮ, ಸದಾನಂದ ಮೂಡಬಿದ್ರೆ, ಸುದಾಮ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ನಿರ್ಮಲಾ ಸುರತ್ಕಲ್, ಜಯರಾಮ ಪುಣಚಿತ್ತಾಯ ಮೊದಲಾದವರು ಹಾಸ್ಯ ಚಟಾಕಿ ಹಾರಿಸಿ ಕೇಳುಗರ ಮನಗೆದ್ದರು.ಶಂಕರಿ ಶರ್ಮ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಾವಿತ್ರಿ ಭಟ್ ಬಡೆಕ್ಕಿಲ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here