ಸಂತ ಫಿಲೋಮಿನಾ ಶಾಲೆ: ರಕ್ಷಕ-ಶಿಕ್ಷಕ ಸಂಘದ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಜೂ. 27ರಂದು ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಜರುಗಿತು.

ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂ. ಡಾ. ಜೆ. ಬಿ. ಸಲ್ದಾನ್ಹ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ವಂ. ಮ್ಯಾಕ್ಸಿಮ್ ಡಿಸೋಜ, ಸಂಘದ ಉಪಾಧ್ಯಕ್ಷ ಇಸ್ಮಾಹಿಲ್ ಬೊಳುವಾರ್ ಉಪಸ್ಥಿತರಿದ್ದರು.

ಮುಖ್ಯ ಗುರು ವಂ. ಮ್ಯಾಕ್ಸಿಮ್ ಡಿಸೋಜ ಶಾಲಾ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೇಷ್ಮಾ ವಾರ್ಷಿಕ ವರದಿ ಮಂಡಿಸಿದರೆ, ರೋಶನ್ ಲೆಕ್ಕಪತ್ರ ಮಂಡಿಸಿದರು.

ನೂತನ ಪದಾಧಿಕಾರಿಗಳು:
ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಹೊಸ ಸದಸ್ಯರನ್ನು ನೇಮಕ ಮಾಡಲಾಯಿತು. ನೂತನ ಉಪಾಧ್ಯಕ್ಷರಾಗಿ ಬಾಬು ಮರಿಕೆ, ಜತೆ ಕಾರ್ಯದರ್ಶಿಯಾಗಿ ಸುಮಲತಾ ಹಾಗೂ ವಿವಿಧ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಚಾಲಕ ಅತಿ ವಂ. ಡಾ. ಜೆ. ಬಿ. ಸಲ್ದಾನ್ಹ, “ಪೋಷಕರು ಮಕ್ಕಳಿಗೆ ವಿಶೇಷ ಸಮಯ ಮೀಸಲಿಡಬೇಕು. ಸತ್ಯ-ಸುಳ್ಳಿನ ಅರಿವು ಮೂಡಿಸಬೇಕು. ಧರ್ಮಗಳ ನಡುವೆ ಸಾಮರಸ್ಯ ಬೆಳೆಸಬೇಕು. ಅತಿಯಾದ ಮೊಬೈಲ್ ಬಳಕೆ, ಮಾದಕ ದ್ರವ್ಯಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು” ಎಂದು ಕರೆ ನೀಡಿದರು.ಶಿಕ್ಷಕ ನರೇಶ್ ಕಾರ್ಯಕ್ರಮ ನಿರೂಪಿಸಿದರು. ಮೋಲಿ ಫೆರ್ನಾಂಡಿಸ್ ಸ್ವಾಗತಿಸಿದರು, ಬೆನೆಟ್ ವಂದಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here