







ಅಧ್ಯಕ್ಷರಾಗಿ ಪುಷ್ಪರಾಜ್ ತಲೆಪ್ಪಾಡಿ, ಉಪಾಧ್ಯಕ್ಷರಾಗಿ ಸುಂದರ ಗುಂಡ್ಯಡ್ಕ, ಕಾರ್ಯದರ್ಶಿಯಾಗಿ ರವಿಕಲಾ ಕೋಡಿ ಆಯ್ಕೆ.


ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಕಕ್ಕೂರು ಒಕ್ಕೂಟದ ನೂತನ ಸಮಿತಿಯ ರಚನೆ ಜೂ.21 ರಂದು ಪ್ರಿಯದರ್ಶಿನಿ ಶಾಲೆಯಲ್ಲಿ ನಡೆದ ಒಕ್ಕೂಟದ ಅಧ್ಯಕ್ಷ ಶಂಕರ ಗುಂಡ್ಯಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ನಡೆಯಿತು.



ನೂತನ ಒಕ್ಕೂಟದ ಅಧ್ಯಕ್ಷರಾಗಿ ಪುಷ್ಪರಾಜ್ ತಲೆಪ್ಪಾಡಿ, ಉಪಾಧ್ಯಕ್ಷರಾಗಿ ಸುಂದರ ಗುಂಡ್ಯಡ್ಕ, ಕಾರ್ಯದರ್ಶಿಯಾಗಿ ರವಿಕಲಾ ಕೋಡಿ ಆಯ್ಕೆಯಾದರು. ಜತೆ ಕಾರ್ಯದರ್ಶಿಯಾಗಿ ಸೌಮ್ಯ ಹಾಗೂ ಕೋಶಾಧಿಕಾರಿಯಾಗಿ ಚಿತ್ರಕಲಾ ಇವರನ್ನು ಆರಿಸಲಾಯಿತು. ಸೇವಾ ಪ್ರತಿನಿಧಿ ಲೀಲಾವತಿ.ಡಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.










