ಹದಗೆಟ್ಟ ನಾಕುಡೇಲು ದೇವಸ್ಯ ರಸ್ತೆ – ತುರ್ತು ದುರಸ್ತಿಗೊಳಿಸುವಂತೆ ಸಾರ್ವಜನಿಕರ ಆಗ್ರಹ

0

ನಿಡ್ಪಳ್ಳಿ; ಇಲ್ಲಿಯ ನಾಕುಡೇಲು ಮೂಲಕ ದೇವಸ್ಯ ಹೋಗುವ ಕಚ್ಚಾ ರಸ್ತೆ ತೀವ್ರ ಹದಗೆಟ್ಟಿದ್ದು ತಕ್ಷಣ ತುರ್ತು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 ಸುಮಾರು ಅರ್ಧ ಕಿ.ಲೋ ಮೀಟರಿನಷ್ಟು ಉದ್ದ ಇರುವ ಈ ಕಚ್ಚಾ ರಸ್ತೆ ಮಳೆ ಆರಂಭವಾದ ನಂತರ ಕೆಸರು ಗದ್ದೆಯಂತಾಗಿ ರೂಪುಗೊಂಡಿದೆ. ಇದರಿಂದ ವಾಹನ ಸವಾರರಿಗೂ, ಪಾದಾಚಾರಿಗಳಿಗೂ ಸಂಚಾರಕ್ಕೆ ಅಡಚಣೆಯಾಗಿ ನರಕ ಯಾತನೆ ಪಡುವಂತಾಗಿದೆ. ರಸ್ತೆ ಬದಿಯಲ್ಲಿ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಶಾಲಾ ಮಕ್ಕಳ ವಾಹನ ಮತ್ತು ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ತಕ್ಷಣ ಸಂಬಂಧ ಪಟ್ಟವರು ಇತ್ತ ಒಮ್ಮೆ ಗಮನ ಹರಿಸಿ ದುರಸ್ತಿ ಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ದುಸ್ಥಿತಿ ಕೇಳುವವರಿಲ್ಲ; ಪ್ರತಿ ಮಳೆಗಾಲದಲ್ಲಿ ಈ ರಸ್ತೆ ಕೆಸರುಮಯವಾಗುತ್ತಿದೆ. ಪಂಚಾಯತ್ ಅಧಿಕಾರಿಗಳಲ್ಲಿ ಹೇಳಿದರೆ ಅದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಉತ್ತರಿಸುತ್ತಾರೆ. ರಸ್ತೆ ಬದಿ ನೀರು ಹರಿದಾಡಲು ಚರಂಡಿ ವ್ಯವಸ್ಥೆಯೂ ಇಲ್ಲ. ನಮ್ಮ ಈ ದುಸ್ಥಿತಿಯನ್ನು ಯಾರೂ ಕೇಳುವವರಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here