ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಶಿಕ್ಷಕ -ರಕ್ಷಕ ಸಂಘದ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಲಕ್ಷಣ ಗೌಡ , ಉಪಾಧ್ಯಕ್ಷರಾಗಿ ವೇದಾವತಿ ಕೆಮ್ಮಾರ, ಕೋಶಾಧಿಕಾರಿಯಾಗಿ ಸುಂದರ ನಾಯ್ಕ ಆಯ್ಕೆ

ಪುತ್ತೂರು : ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಶಿಕ್ಷಕ -ರಕ್ಷಕ ಸಂಘದ ಮಹಾಸಭೆಯು ಶಾಲಾ ಸಂಚಾಲಕರಾದ ಶಿವರಾಮ್ ಭಟ್ ಬೀರ್ಣಕಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ದಿವಾಕರ ರೈ ಕೆರೆಮೂಲೆ ಅವರು ಸಭೆಯ ಔಚಿತ್ಯವನ್ನು ತಿಳಿಸಿ ಶಾಲೆಯ ಸುದೀರ್ಘ ಬೆಳವಣಿಗೆಗೆ ಅಹರ್ನಿಶಿ ದುಡಿದ ಮಹಾನ್ ಚೇತನಗಳನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ಶಿಕ್ಷಕ ರಕ್ಷಕ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಲಕ್ಷಣ ಗೌಡ , ಉಪಾಧ್ಯಕ್ಷರಾಗಿ ವೇದಾವತಿ ಕೆಮ್ಮಾರ, ಕೋಶಾಧಿಕಾರಿಯಾಗಿ ಸುಂದರ ನಾಯ್ಕ ಕೆರೆಮೂಲೆ ಅವರನ್ನು ಆಯ್ಕೆ ಮಾಡಿದರು.ನಿಕಟಪೂರ್ವ ಅಧ್ಯಕ್ಷೆ ರೇವತಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷಣ ಗೌಡ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶಿವರಾಮ ಭಟ್ ಬೀರ್ಣಕಜೆ ಅವರು ಮಾತನಾಡಿ, ಷಣ್ಮುಖ ದೇವ ಪ್ರೌಢಶಾಲೆಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಸತತ 4 ವರ್ಷ ಗಳಿಂದ ಶೇ 100 ಫಲಿತಾಂಶ ದಾಖಲಾಗುತ್ತಿದ್ದು, ಶ್ರಮಿಸಿದ ಶಿಕ್ಷಕರಿಗೆ ,ಪೋಷಕರಿಗೆ, ಆಡಳಿತ ಸಮಿತಿಗೆ ಅಭಿನಂದನೆ ತಿಳಿಸಿದರು. ಮುಂದೆಯೂ ಶಾಲೆಯ ಕೆಲಸ ಕಾರ್ಯಗಳಿಗಾಗಿ ಪೋಷಕರ ಸಹಕಾರ ಯಾಚಿಸಿದರು.

ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು, ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಶಾಲಾ ಮುಖ್ಯಗುರು ಕೃಷ್ಣವೇಣಿ ಸ್ವಾಗತಿಸಿ ,ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ವಂದಿಸಿದರು.

LEAVE A REPLY

Please enter your comment!
Please enter your name here