ಜು.3: ಎಸ್.ಎಲ್.ವಿ. ಕಲರ್ಸ್ ನಿರ್ಮಾಣದ ‘ಅಪರಾಧಿ ನಾನಲ್ಲ’ ಚಲನಚಿತ್ರ ರಾಜ್ಯಾದ್ಯಂತ ತೆರೆಗೆ

0

  • ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ‌ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಪುತ್ತೂರು: ಎಸ್.ಎಲ್.ವಿ. ಕಲರ್ಸ್ ನಿರ್ಮಾಣದ ಆ್ಯಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಅಭಿನಯದ “ಅಪರಾಧಿ ನಾನಲ್ಲ” ಕನ್ನಡ ಸಿನಿಮಾದ ಪ್ರೀಮಿಯರ್ ಶೋ ಜು.1ರಂದು ಪುತ್ತೂರಿನ ಜಿ.ಎಲ್.ಮಹಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು. ರಾಜೀವಿ ಶೆಟ್ಟಿ ಅರ್ಬಿರವರು ದೀಪಬೆಳಗಿಸಿ ಕಾರ್ಯಕ್ರಮಕ್ಕೆ‌ ಚಾಲನೆ‌ ನೀಡಿದರು‌.

ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾದ ದಿವಾಕರ ದಾಸ್ ನೇರ್ಲಾಜೆ, ರೇಣುಕಾ ಚೌಟ, ಪ್ರಶಾಂತ್ ಶೆಟ್ಟಿ,‌ಸಂತೋಷ್ ಶೆಟ್ಟಿ ಕುಂಬ್ಳೆ, ನಿರ್ದೇಶಕರಾದ ಯಶಂತ್ ಕಲ್ಲಡ್ಕ, ನಟರಾದ ಸುಂದರ ರೈ ಮಂದಾರ, ವಿನೋದ್ ಶೆಟ್ಟಿ, ಅತಿಥಿಗಳಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮೋಹನ್ ಭಟ್ ಉರಿಮಜಲು, ಬುಡಿಯಾರು ರಾಥಾಕೃಷ್ಣ ರೈ, ರಾಮ್ ದಾಸ್ ಶೆಟ್ಟಿ ವಿಟ್ಲ, ಬಾಲನಟಿ ಸಮನ್ವಿ ಶೆಟ್ಟಿ, ಗಿರೀಶ್‌ ಭಟ್, ರಾಜೇಶ್ ಬಾಳೆಕಲ್ಲು, ರಾಜಶೇಖರ ಶೆಟ್ಟಿ, ರೂಪೇಶ್ ಶೆಟ್ಟಿ, ರಂಜಿತ್ ಶೆಟ್ಟಿ ಗುಬ್ಯ, ಜಯಪ್ರಕಾಶ್ ಬದಿನಾರು, ರವಿಪ್ರಕಾಶ್ ವಿಟ್ಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೇಮ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

ಪ್ರೀಮಿಯರ್‌ ಶೋ ನಲ್ಲಿ ಪ್ರೇಕ್ಷಕರ ಮನ ಗೆದ್ದ ಚಿತ್ರ:
‘ಅಪರಾಧಿ ನಾನಲ್ಲ’ ಚಿತ್ರದ ಪ್ರೀಮಿಯರ್‌ ಶೋಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಕರಾವಳಿಯಲ್ಲಿ ಇಂತಹ ವಿಭಿನ್ನ ಪ್ರಯೋಗದ ಚಿತ್ರ ಮೂಡಿ ಬಂದಿರುವುದು ಸಂತಸದ ಸಂಗತಿ. ಬಹಳ ಸಮಯದ ಬಳಿಕ ಉತ್ತಮ ಚಿತ್ರ ನೋಡಿದ ಅನುಭವವಾಗಿದೆ. ಆರಂಭದಿಂದ ಅಂತ್ಯದವರೆಗೂ ಕುತೂಹಲದಿಂದ ನೋಡಿಸಿಕೊಳ್ಳುವ ಸಿನಿಮಾ ಇದಾಗಿದೆ. ಚಿತ್ತದ ನಿರ್ದೇಶನ ಹಾಗೂ ಕಲಾವಿದರ ನಟನೆ ಎರಡೂ ಅತ್ಯುತ್ತಮವಾಗಿದ್ದು, ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಚಿತ್ರವಾಗಿದೆ ಎನ್ನುತ್ತಾರೆ.

ಜು.3ರಂದು ರಾಜ್ಯಾದ್ಯಾಂತ ತೆರೆಗೆ:
ಎಸ್.ಎಲ್.ವಿ. ಕಲರ್ಸ್ ನಿರ್ಮಾಣದ ‘ಅಪರಾದಿ ನಾನಲ್ಲ’ ಕನ್ನಡ ಚಲನಚಿತ್ರವು ಜು.3ರಂದು ಬಿಡುಗಡೆಯಾಗಲಿದೆ. ಕುಖ್ಯಾತ ಭೂಗತ ಪಾತಕಿಯನ್ನು ಕೊಲೆ ಮಾಡಿ ಜೈಲು ಸೇರುವ ನಾಯಕನೊಬ್ಬನ ಸುತ್ತ ಕಥೆ ಹೆಣೆಯಲಾಗಿದ್ದು, ಜೈಲಿನ ಒಳಗಿನ ಮಾರಣಾಂತಿಕ ದಾಳಿಗಳು ಮತ್ತು ಅಪರಾಧ-ಅಪರಾಧಿಗಳಲ್ಲದವರ ನಡುವಿನ ನೈಜ ಹೋರಾಟವೇ ಈ ಚಿತ್ರದ ಮುಖ್ಯ ಕಥೆಯಾಗಿದೆ.


ನಾಯಕ ನಟಿಯಾಗಿ ಅಮೃತ ಮೂರ್ತಿ, ಶ್ರೀಶಾ ಸಾಮಾನಿ ಹಾಗೂ ಕನ್ನಡ, ತೆಲುಗು ಸಿನಿಮಾ ನಟಿ ಜ್ಯೋತಿ ರೈ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ನವೀನ್ ಡಿ ಪಡೀಲ್, ಅರ್ಜುನ್ ಕಜೆ, ಅನೂಪ್ ಸಾಗರ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆ ಪಟ್ಟಿಯ ಪ್ರಕಾರ, ಚಿತ್ರವು ರಾಜ್ಯಾದ್ಯಂತ ಸಾಮಾನ್ಯ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ಒಟ್ಟು 80 ಕಡೆಗಳಲ್ಲಿ ಪ್ರದರ್ಶನ ಕಾಣಲಿದೆ. ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಚಾಮರಾಜನಗರ, ಚನ್ನರಾಯಪಟ್ಟಣ, ಶ್ರೀರಂಗಪಟ್ಟಣ ಸೇರಿದಂತೆ ರಾಜ್ಯದ ವಿವಿಧ ನಗರಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಗೋಪಾಲನ್ ಸಿನೆಮಾಸ್, ಸಿನೆಪೊಲಿಸ್, ಮಿರಾಜ್, ಪಿವಿಆರ್ ಹಾಗೂ ಐನಾಕ್ಸ್ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರದರ್ಶನ ನಿಗದಿಯಾಗಿದೆ. ಸಾಮಾನ್ಯ ಚಿತ್ರಮಂದಿರಗಳಲ್ಲಿ ವಾರಕ್ಕೆ 287 ಪ್ರದರ್ಶನಗಳು ನಿಗದಿಯಾಗಿದ್ದು, ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಜೈಲಲ್ಲಿರುವವರು ಎಲ್ಲರೂ ಅಪರಾದಿಗಳಾಗಿರುವುದಿಲ್ಲ
ನಿರ್ದೇಶಕ ಯಶಂತ್ ಕಲ್ಲಡ್ಕರವರು ಮಾತನಾಡಿ ಚೆನ್ನಾಗಿ ಸಿನಿಮಾ ಮಾಡಿದ್ದೀವಿ. ಅಪರಾಧಿ ನಾನಲ್ಲ ಅನ್ನೋ ಟೈಟಲ್ ಯಾಕೆ ಅಂದ್ರೆ ಜೈಲಿನಲ್ಲಿ ಎಷ್ಟೋ ಜನ ಇರ್ತಾರೆ. ಆದರೆ ಅದೆಷ್ಟೋ ಜನ ಅಪರಾಧಿಗಳೇ ಆಗಿರೋದಿಲ್ಲ. ಒಂದು ಸತ್ಯ ಘಟನೆ ಇಟ್ಟುಕೊಂಡು, ನಮ್ಮ ಕರಾವಳಿ ಭಾಗದ ಕೆಲವೊಂದು ಘಟನೆಗಳನ್ನು ಸೇರಿಸಿಕೊಂಡು ಕಥೆ ಹೆಣೆದಿದ್ದೇವೆ. ಕಲಾವಿದರು ಒಬ್ಬರಿಂದ ಒಬ್ಬರು ಕಾಂಪಿಟೇಶನ್ ನೀಡುವ ರೀತಿಯಲ್ಲಿ ಅಭಿನಯಿಸಿದ್ದಾರೆ. ಎಲ್ಲರೂ‌ ನೋಡಿ ಚಲನಚಿತ್ರವನ್ನು ಗೆಲ್ಲಿಸಿ.
ಯಶಂತ್ ಕಲ್ಲಡ್ಕ, ನಿರ್ದೇಶಕರು

ಯಶಂತ್ ಕಲ್ಲಡ್ಕ, ನಿರ್ದೇಶಕರು

ಅದ್ಭುತ ಕಥಾವಸ್ತು – ಎಲ್ಲರೂ ನೋಡಲೇ ಬೇಕಾದ ಚಿತ್ರ
‘ಅಪರಾದಿ ನಾನಲ್ಲ’ ಚಿತ್ರದಲ್ಲಿ ನಾನೂ ಅಭಿನಯ‌ ಮಾಡಿದ್ದೇನೆ. ಆದರೆ ಪ್ರೇಕ್ಷಕನಾಗಿ ಕುಳಿತು ಚಲನ‌ಚಿತ್ರ ನೀಡಿದಾಗ ಬಹಳಷ್ಟು ಕುಶಿ ಅನಿಸಿತು. ಅದ್ಭುತ ಕಥಾ ವಸ್ತುವನ್ನು ಯಶಂತ್ ಕಲ್ಲಡ್ಕರವರು ಆಯ್ದುಕೊಂಡಿದ್ದಾರೆ. ವಿಭಿನ್ನವಾದ ನಿರ್ದೇಶನ, ಕ್ಯಾಮರಾ ವರ್ಕ್ ಈ ಚಿತ್ರದಲ್ಲಿದೆ. ಒಟ್ಟಾರೆ ಚಿತ್ರ ಬಹಳಷ್ಟು ಕುತೂಹಲ ಭರಿತವಾಗಿದ್ದು, ಮುಂದೇನು ಎನ್ನುವಂತೆ ಪ್ರೇಕ್ಷಕರನ್ನು ಹಿಡಿದಿಡುವಂತೆ ಮಾಡಿದೆ. ಪ್ರತಿಯೋರ್ವರು ನೋಡಲೇಬೇಕಾದ ಚಿತ್ರ ಇದಾಗಿದೆ.
ಸುಂದರ ರೈ ಮಂದಾರ, ಚಲನಚಿತ್ರ ನಟ

ಸುಂದರ ರೈ ಮಂದಾರ, ಚಲನಚಿತ್ರ ನಟ

LEAVE A REPLY

Please enter your comment!
Please enter your name here