ಆಕಾಶವಾಣಿಯಲ್ಲಿ ನಾಳೆ ಜು.3ಕ್ಕೆ ಶಿಕ್ಷಕ ಪ್ರಶಾಂತ್ ಅನಂತಾಡಿಯವರಿಂದ ‘ವನಮಹೋತ್ಸವ’ ಭಾಷಣ

0


ಪುತ್ತೂರು: ಮಂಗಳೂರು ಆಕಾಶವಾಣಿಯಲ್ಲಿ ಜು.3ರಂದು ಬೆಳಿಗ್ಗೆ 8.30ಕ್ಕೆ ಶಿಕ್ಷಕ ಪ್ರಶಾಂತ್ ಅನಂತಾಡಿಯವರ ಭಾಷಣ ಪ್ರಸಾರವಾಗಲಿದೆ.ಜುಲೈ ತಿಂಗಳಲ್ಲಿ ದೇಶದಾದ್ಯಂತ ನಡೆಯುವ ವನಮಹೋತ್ಸವ ಸಪ್ತಾಹದ ಅಂಗವಾಗಿ “ವನಮಹೋತ್ಸವ ಆಗಬೇಕು ನಿತ್ಯೋತ್ಸವ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇವರ ಭಾಷಣ ಪ್ರಸಾರವಾಗಲಿದೆ.

ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಅನಂತಾಡಿಯವರ ಹಲವು ಭಾಷಣಗಳು ಹಾಗೂ ಭಾಷಣ ಸರಣಿಗಳು ಈ ಹಿಂದೆ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ಇವುಗಳಲ್ಲಿ ಕೆಲವು ಭಾಷಣಗಳು ರಾಜ್ಯವ್ಯಾಪಿ ಪ್ರಸಾರವನ್ನೂ ಕಂಡಿವೆ.

LEAVE A REPLY

Please enter your comment!
Please enter your name here