







ಪುತ್ತೂರು: ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ, ಪಡುತೋನ್ಸೆ-ಹೂಡೆ ಇವರ ಶ್ರೀ ನಾರಾಯಣ ಗುರು ಸಭಾಭವನದಲ್ಲಿ, ತುಳುವೆರ ತುಳುಚಾವಡಿ ಮಂಗಳೂರು ಇವರ ಆಶ್ರಯದಲ್ಲಿ “ಶ್ರೀ ಜಗನ್ಮಾತಾ ಕ್ಷೇತ್ರ ಮಹಿಮೆ” ಎಂಬ ಆಧ್ಯಾತ್ಮಿಕ ಕಾರ್ಯಕ್ರಮವು ಜು.5ರಂದು ಸಂಜೆ 3.30 ರಿಂದ 6.00 ಗಂಟೆಯವರೆಗೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಹರಿಕೀರ್ತನೆ, ಪ್ರವಚನ, ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.ಈ ಧಾರ್ಮಿಕ ಕಾರ್ಯಕ್ರಮಕ್ಕೆ ಊರ ಹಾಗೂ ಪರ ಊರಿನ ಸಮಾಜ ಬಾಂಧವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ರತನ್ ಡಿ. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಬಿ. ಅಂಚನ್ ಹಾಗೂ ಕೋಶಾಧಿಕಾರಿ ನವೀನ್ ಕುಮಾರ್ ಗುಳಿಬೆಟ್ಟು ಕೇಮಣ್ಣ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.












