ಜು.5: ಒಡಿಯೂರು ಶ್ರೀ ಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ಕೆಸರ್‌ದ ಕಂಡೊಡೊಂಜಿ ದಿನ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದದಲ್ಲಿ ಆ.8ರಂದು ನಡೆಯಲಿರುವ ಶ್ರೀ ಗುರುದೇವಾನಂದ ಸ್ವಾಮೀಜಿರವರ ಜನ್ಮದಿನೋತ್ಸವ – ಗ್ರಾಮೋತ್ಸವದ – ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಜು.5ರಂದು ಬೆಳಿಗ್ಗೆ ಗಂಟೆ 9.30ರಿಂದ ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿ ಕೆಸರ್‌ದ ಕಂಡೊಡೊಂಜಿ ದಿನ ಕೆಸರುಗದ್ದೆ ಆಟೋಟಗಳು ಜರಗಲಿದೆ. ಮುಕ್ತ ಸ್ಪರ್ಧೆ : ನಿಧಿ ಶೋಧನೆ, 5 ರಿಂದ 7ನೇ ತರಗತಿಯ ಮಕ್ಕಳಿಗೆ (ಬಾಲಕ-ಬಾಲಕಿಯರಿಗೆ ಪ್ರತ್ಯೇಕ) ಮಡಿಕೆ ಒಡೆಯುವ ಸ್ಪರ್ಧೆ, ಕೆಸರುಗದ್ದೆ ಓಟ , ಹಾಳೆಯಲ್ಲಿ ಎಳೆಯುವುದು.


8ರಿಂದ 10ನೇ ತರಗತಿಯ ಮಕ್ಕಳಿಗೆ (ಬಾಲಕ-ಬಾಲಕಿಯರಿಗೆ ಪ್ರತ್ಯೇಕ) ಕೆಸರುಗದ್ದೆ ಓಟ , ಹಾಳೆಯಲ್ಲಿ ಎಳೆಯುವುದು, ಮಡಿಕೆ ಒಡೆಯುವ ಸ್ಪರ್ಧೆ, ಮೂರು ಕಾಲಿನ ಓಟ, ಗೋಪುರ ರಚನೆ (12 ಜನರ ತಂಡ), ಸಾರ್ವಜನಿಕರಿಗೆ (ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ) ಗೋಪುರ ರಚನೆ (12 ಜನರ ತಂಡ), ಮಡಿಕೆ ಒಡೆಯುವ ಸ್ಪರ್ಧೆ (ಮಹಿಳೆಯರಿಗೆ ಮಾತ್ರ) , ಹಗ್ಗಜಗ್ಗಾಟ (7 ಜನರ ತಂಡ), ಮೂರು ಕಾಲಿನ ಓಟ.‌ ಹಿರಿಯ ನಾಗರಿಕರಿಗೆ ಓಟ, ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here