







ಪುತ್ತೂರು: ಕೊಡಿಪ್ಪಾಡಿ ನಿವಾಸಿಯೊಬ್ಬರು ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ ನರಹರಿ ಪರ್ವತದ ಬಳಿ ಅಪಘಾತಕ್ಕೆ ಬಲಿಯಾಗಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ಕಲ್ಕಡ್ಕ ನಡುವಿನ ನರಹರಿ ಪರ್ವತದ ಮುಂಭಾಗದಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ವೇಳೆ ಬೈಕ್ ಸವಾರರಾಗಿದ್ದ ಕೊಡಿಪ್ಪಾಡಿ ನಿವಾಸಿ ಅಶೋಕ್ (36ವ) ಎಂಬವರು ಮೃತಪಟ್ಟಿದ್ದಾರೆ.





ಅಶೋಕ್ ಅವರು ಪುತ್ತೂರು ಶ್ರೀ ಲಕ್ಷ್ಮಿವೆಂಕಟರಮಣ ದೆವಸ್ಥಾನದ ಬಳಿಯ ಇಲೆಕ್ಟ್ರಿಕಲ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಮೃತರು ತಂದೆ ರಮೇಶ್ ನಾಯ್ಕ, ಇಬ್ಬರು ಸಹೋದರರನ್ನು ಅಗಲಿದ್ದಾರೆ.










