







ಉಪ್ಪಿನಂಗಡಿ: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕರಾಯ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ, ಕರಾಯ ನಿವಾಸಿ ಕೆ.ಕೆ. ಶಾಹುಲ್ ಹಮೀದ್ ಅವರ ತಾಯಿ ಕೆ.ಕೆ. ಮರಿಯಮ್ಮ ಹಾಜಿಮ್ಮ (85) ಕೆಲ ದಿನಗಳ ಅನಾರೋಗ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು.



ಮರಿಯಮ್ಮರವರ ನಿಧನದ ಮಾಹಿತಿ ರವಾನೆ ಆಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷದ ನಾಯಕರು, ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು ಪುತ್ರರಾದ ಕೆ.ಕೆ. ಶಾಹುಲ್ ಹಮೀದ್, ಕೆ.ಕೆ. ಅಶ್ರಫ್, ಕೆ.ಕೆ. ಶರೀಫ್, ಪುತ್ರಿಯರಾದ ಖತೀಜಮ್ಮ, ಜೊಹರಾಬಿ, ರುಖ್ಯ, ರಹಿಮತ್, ಸಕೀನ, ಮಮ್ತಾಝ್‌ರನ್ನು ಅಗಲಿದ್ದಾರೆ.












