







ರಾಮಕುಂಜ: ಕೊಯಿಲ ಗ್ರಾಮದ ಪೂರಿಂಗ ನಿವಾಸಿ ಆದಂ ಹಾಜಿ ಬಡ್ಡಮೆ (73 ವ.) ಅವರು ಕೆಲ ದಿನಗಳ ಅನಾರೋಗ್ಯದಿಂದ ಜು.5ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.
ಆದಂ ಹಾಜಿಯವರು ಗಂಡಿಬಾಗಿಲು ಕುತುಬಿಯ್ಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದಿಯಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಸಫೀಯ, ಪುತ್ರರಾದ ಅಬ್ದುಲ್ ಸಲಾಂ, ಮಹಮ್ಮದ್ ಸಮೀರ್, ಶಕೀಲ್, ಪುತ್ರಿಯರಾದ ಸಹನಾಝ್, ಸಂಶೀರ, ಸಫ್ನಾಝ್ ಇವರನ್ನು ಅಗಲಿದ್ದಾರೆ.












