







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರಿಂದ ಸ್ವರ್ಣ ಸಮರ್ಪಣೆ ಕಾರ್ಯ ನಡೆಯುತ್ತಿದ್ದು, ಕಳೆದ ಮೂರು ದಿನದಲ್ಲಿ ಭಕ್ತರು 17 ಗ್ರಾಂ ಸ್ವರ್ಣ ಸಮರ್ಪಣೆ ಮಾಡಿದರು.


ಮುಂಬಯಿಯ ಗುರುಪ್ರಿಯ ಎಂಬವರು 1 ಗ್ರಾಂ ಚಿನ್ನವನ್ನು ಪುತ್ತೂರಿನ ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಅವರ ಮೂಲಕ ದೇವಳಕ್ಕೆ ಹಸ್ತಾಂತರಿಸಿದರು. ಶ್ರೀನಿವಾಸ್ ಹೆಬ್ಬಾರ್ ಮತ್ತು ಗೋಪಾಲಕೃಷ್ಣ ಪಾಂಗಣ್ಣಾಯ ಅವರು ತಲಾ 1 ಗ್ರಾಂ, ಅನಿಲ್ ಕುಮಾರ್ ಮುಂಡೋಡಿ ಮತ್ತು ಮನೆಯವರು 1 ಗ್ರಾಂ, ಮರೀಲ್ ಕಾಡಮನೆ ಕೆ.ಶ್ರೀಪತಿ ರಾವ್ ಮತ್ತು ಮನೆಯವರು 5.003 ಗ್ರಾಂ, ಬೊಳುವಾರಿನ ತಿರುಮಲೇಶ್ ಬಿ.ಎಲ್ ಅವರು 8 ಗ್ರಾಂ, ಅವರ ಪುತ್ರಿ ಸ್ಪೂರ್ತಿ ಅವರು 1 ಗ್ರಾಂ. ಸ್ವರ್ಣವನ್ನು ದೇವಳಕ್ಕೆ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದಾನಿಗಳನ್ನು ಗೌರವಿಸಿದರು. ದೇವಳದ ಪ್ರಧಾನ ಅರ್ಚಕರು ಪ್ರಸಾದ ವಿತರಿಸಿದರು.













