






ಕಡಬ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ., ಪುತ್ತೂರು ಇದರ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ 2025–26ನೇ ಆರ್ಥಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಾಖೆಯಾಗಿ ಕಡಬ ಶಾಖೆ ಗೌರವಕ್ಕೆ ಪಾತ್ರವಾಯಿತು.


ಸಂಘದ ಆರ್ಥಿಕ ಬೆಳವಣಿಗೆ, ಸದಸ್ಯ ಸೇವೆ, ಸಾಲ ವಿತರಣೆ ಹಾಗೂ ವಸೂಲಾತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದಾಖಲಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.



ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಉಪಾಧ್ಯಕ್ಷರಾದ ರಾಮಕೃಷ್ಣ ಯು ಪಿ.. ಹಾಗೂ ಎಲ್ಲಾ ನಿರ್ದೇಶಕರು.ಪ್ರಶಸ್ತಿ ನೀಡಿ ಗೌರವಿಸಿದರು, ಈ ಸಂದರ್ಭದಲ್ಲಿ ಕಡಬ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಸುದರ್ಶನ ಗೌಡ ಕೋಡಿಂಬಾಳ, ವಿಶ್ವನಾಥ ಗೌಡ ಇಡಾಳ ಬೆಲ್ಯಪ್ಪ ಗೌಡ ಕಾರ್ಕಳ, ನೀಲಾವತಿ ಶಿವರಾಮ್, ಕಮಲ ಶ್ರೀನಿವಾಸ್ ವಾ ಲ್ತಾಜೆ, ಗಣೇಶ್ ಗೌಡ ಮುಜೂರ್, ಕೃಷ್ಣಪ್ಪ ಗೌಡ ಕೊಂಬಾರ್, ಕುಶಾಲಪ್ಪ ಗೌಡ ಕೇರ್ನಡ್ಕ, ಪುರುಷೋತ್ತಮ್ ಗೌಡ ಕಳಿಗೆ, ಬಾಲಕೃಷ್ಣ ಗೌಡ ಹೇಮಳ, ಜಯರಾಮ್ ಬಳಕ್ಕಬೆ, ಕುಶಾಲಪ್ಪ ಗೌಡ ನಡುವಳಿಕೆ, ಭವಾನಿ ಶಂಕರ ಮೇಲಾoಟ, ಚಂದ್ರಶೇಖರ ಗೌಡ ಕೊಡಿಬೈಲು, ಚಂದ್ರ ಶೇಕರ ಕದಂಪಲ, ಭಾಸ್ಕರ್ ಎಲುವಾಳೆ, ಹರೀಶ್ ಕೋಡಂದೂರ್, ಕಡಬ ಶಾಖಾ ಮ್ಯಾನೇಜರ್ ಶಿವಪ್ರಸಾದ್, ಸಿಬ್ಬಂದಿ ಗಳಾದ ಅಶ್ವಿತಾ, ಚೇತನ್, ಯತೀಶ್, ಪಿಗ್ಮಿ ಸಂಗ್ರಹಕರಾದ ಪೂರ್ಣಿಮಾ ಹಾಗೂ ಗೀತಾ ಮುಂತಾದವರು ಪ್ರಶಸ್ತಿ, ಶಾಲು ನೀಡಿ ಗೌರವಿಸಿದರು, ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಶಾಖೆಗಳ ಸಿಬ್ಬಂದಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.










