ಕೆಯ್ಯೂರು: ತಾಲೂಕು ಮಟ್ಟದ ಸಂಜೀವಿನಿ ಮಾಸಿಕ ಸಂತೆ : 13,750 ರೂ. ವಹಿವಾಟು

0

ಕೆಯ್ಯೂರು: ತಾಲೂಕು ಮಟ್ಟದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವು ಜು.3ರಂದು ಕೆಯ್ಯೂರು ಗ್ರಾಮದ ಕೈಕಂಬ ಜಂಕ್ಷನ್‌ನಲ್ಲಿ ನಡೆಯಿತು.

ಕೆಯ್ಯೂರು ಗ್ರಾಮಪಂಚಾಯತ್ ಸಹಕಾರದೊಂದಿಗೆ ಶ್ರೀ ದುರ್ಗಂಬಿಕಾ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ (ರಿ) ಕೆಯ್ಯೂರು ಇದರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ. ಅವರು ದೀಪ ಪ್ರಜ್ವಲಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ವಿವಿಧ ಗ್ರಾಮಗಳ ಮಹಿಳೆಯರ ಭಾಗವಹಿಸುವಿಕೆ ಸಂತೆಯಲ್ಲಿ ಕೆಯ್ಯೂರು, ಕೆದಂಬಾಡಿ, ಅರಿಯಡ್ಕ, ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ, ಬಡಗನ್ನೂರ್, ಒಳಮೋಗ್ರು, ಮುಂಡೂರು ಸಂಜೀವಿನಿ ಒಕ್ಕೂಟದ ಸದಸ್ಯರು ತಮ್ಮ ಸ್ವಸಹಾಯ ಗುಂಪುಗಳ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದರು.

ಮಾರಾಟವಾದ ಉತ್ಪನ್ನಗಳು:
ಜೇನುತುಪ್ಪ, ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿ, ಬರ್ಪಿ, ಉಣ್ಣಿಪ್ಪಂ, ಹೇರ್ ಆಯಿಲ್, ಮಸಾಲಾ ಪುಡಿಗಳು, ತೆಂಗಿನ ಎಣ್ಣೆ, ಅನಾನಸು, ಮೆಂತೆ ಅವಲಕ್ಕಿ, ಸಿರಿಧಾನ್ಯ ಹುಡಿ, ಸಿದ್ಧ ಉಡುಪು, ಸೋಪ್, ಫಿನೋಯಿಲ್, ಸೊಪ್ಪು-ತರಕಾರಿಗಳುಸಂತೆಯಲ್ಲಿ ಒಟ್ಟು 13,750 ರೂ. ಆದಾಯ ಗಳಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಬಿಆರ್‌ಪಿ, ಎಂ.ಬಿ.ಕೆ, ಎಲ್‌ಸಿಆರ್‌ಪಿ, ಕೃಷಿ ಸಖಿಗಳು, ಪಶುಸಖಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here