ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ.ಪುತ್ತೂರು ಬೆಳ್ಳಾರೆ ಶಾಖೆಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

0

ಬೆಳ್ಳಾರೆ ಶಾಖೆ ಅಲ್ಪ ಅವಧಿಯಲ್ಲಿ ಉನ್ನತ ಪ್ರಗತಿ ಸಾಧಿಸಿದೆ : ಚಿದಾನಂದ ಬೈಲಾಡಿ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು ಇದರ ಬೆಳ್ಳಾರೆ ಶಾಖೆಯು ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿ 4 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ ಜು.06 ರಂದು ಬೆಳಿಗ್ಗೆ ಕಚೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.ಬಳಿಕ ಸಭೆ ನಡೆಯಿತು.


ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ ನಮ್ಮ ಸಂಘವು 10 ಶಾಖೆಗಳನ್ನು ಹೊಂದಿದ್ದು ಉತ್ತಮ ವ್ಯವಹಾರವನ್ನು ನಡೆಸುತ್ತಿದೆ.ಬೆಳ್ಳಾರೆ ಶಾಖೆಯು ಸ್ಪರ್ಧಾತ್ಮಕ ರೀರಿಯಲ್ಲಿ ಸಾಧನೆ ಮಾಡಿದೆ.ಅಲ್ಪ ಅವಧಿಯಲ್ಲಿ ಉನ್ನತ ಮಟ್ಟಕ್ಜೆ ಏರಿದೆ ಇದು ಗ್ರಾಹಕರ ನಿರಂತರ ಪ್ರೋತ್ಸಾಹ ,ಆಡಳಿತ ಮಂಡಳಿಯ ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.


ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ಶುಭಹಾರೈಸಿ ಮಾತನಾಡಿದರು. ಸಂಘವು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಸಲಹಾ ಸಮಿತಿಯ ನಿರ್ದೇಶಕರು ಹಾಗೂ ಶಾಖೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಸುದರ್ಶನ ಗೌಡ ಕೋಡಿಂಬಾಳ, ಪ್ರವೀಣ್ ಕುಂಟ್ಯಾನ, ತೇಜಸ್ವಿನಿ ಶೇಖರ ಗೌಡ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಗೌಡ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರಾದ ನಾರಾಯಣ ಗೌಡ ಆರ್ವಾರ,ಉಮೇಶ್ ಕೆ.ಎಂ.ಬಿ,ವಾಸುದೇವ ಗೌಡ ನಡ್ಕ,ರವೀಂದ್ರ ಗೌಡ ಮರಕ್ಕಡ,ಪದ್ಮನಾಭ ಗೌಡ ಬೀಡು,ರವಿನಾಥ ಮಡ್ತಿಲ,ಶ್ರೀಮತಿ ಕಮಲಾವತಿ ಎನ್.ಎಸ್.ಪ್ರಶಾಂತ ತಂಟೆಪ್ಪಾಡಿ,ಕೂಸಪ್ಪ ಗೌಡ ಮುಗುಪ್ಪು,ಕುಂಬ್ರ ಸಲಹಾ ಸಮಿತಿ ಸದಸ್ಯರಾದ ಶ್ರೀಧರ ಗೌಡ ಅಂಗಡಿ ಹಿತ್ಲು,ತಿರುಮಲೇಶ್ವರ ಗೌಡ ದೊಡ್ಡಮನೆ,ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಶಾಖೆಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಬೆಳ್ಳಾರೆ ಶಾಖೆಯ ಶಾಖಾ ಪ್ರಬಂಧಕ ಕಾರ್ತಿಕ್ ಎಂ.ವಂದಿಸಿದರು.

LEAVE A REPLY

Please enter your comment!
Please enter your name here