






ಶಾಲಾ ನಾಯಕಿಯಾಗಿ ಸಹ್ನಾ, ಉಪನಾಯಕಿಯಾಗಿ ಶಝಾ ಫಾತಿಮಾ


ಕಾಣಿಯೂರು: ಬೆಳಂದೂರು ಗ್ರಾಮದ ಸ.ಹಿ.ಪ್ರಾ.ಶಾಲೆ ಪಳ್ಳತ್ತಾರಿನಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಸಿ ಮಂತ್ರಿ ಮಂಡಲ ರಚಿಸಲಾಯಿತು.
ಶಾಲಾ ನಾಯಕಿಯಾಗಿ ಸಹ್ನಾ, ಉಪನಾಯಕಿಯಾಗಿ ಶಝಾ ಫಾತಿಮಾ, ಶಿಕ್ಷಣ ಮಂತ್ರಿಯಾಗಿ ದೀಪ್ತಿ,ಹಣಕಾಸು ಮಂತ್ರಿಯಾಗಿ ಮುಹಮ್ಮದ್ ಶಹೀಮ್, ಆರೋಗ್ಯ ಮಂತ್ರಿಯಾಗಿ ಶಮ,ಫಾತಿಮತ್ ಮುನೀಫಾ, ಆಹಾರ ಮಂತ್ರಿಯಾಗಿ ಧನ್ವಿ,ದೀಕ್ಷಿತಾ, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ನಿಶಾದ್,ಮೈಮೂನತ್ ರಾಹಿಲಾ, ರಕ್ಷಣಾ ಮಂತ್ರಿಯಾಗಿ ಫಾತಿಮತ್ ಜೋಹರಾ, ಹರ್ಷಲ್, ನೀರಾವರಿ ಮಂತ್ರಿಯಾಗಿ ಅಬ್ದುಲ್ ರಾಝಿಕ್, ಮುಹಮ್ಮದ್ ರಾಫಿದ್ , ವಾರ್ತಾ ಮಂತ್ರಿಯಾಗಿ ಖದೀಜತ್ ಉಮೈಬಾ,ಪುಣ್ಯಶ್ರೀ, ಸ್ವಚ್ಛತಾ ಮಂತ್ರಿಯಾಗಿ ಜಸೀಲಾ,ಫಹೀಮ್,ಶಝ್ನಾ,ಕಾನೂನು ಮಂತ್ರಿಯಾಗಿ ಹಸನ್,ಫಾತಿಮಾ, ಗ್ರಂಥಾಲಯ ಮಂತ್ರಿಯಾಗಿ ರಿಝಾ ಫಾತಿಮಾ,ನಜಾ, ತೋಟಗಾರಿಕಾ ಮಂತ್ರಿಯಾಗಿ ಸೀಜಲ್,ಅಹ್ಮದ್ ಶಿಬ್ಲಿ, ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ಫಹೀಮಾ, ಅಭಿವೃದ್ಧಿ ಮಂತ್ರಿಯಾಗಿ ರಾಝಿಕ್,ಮುಝಮ್ಮಿಲ್ ಆಯ್ಕೆಯಾದರು.



ಶಾಲಾ ಮುಖ್ಯಗುರು ಕವಿತಾ ಎನ್ ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.ಶಿಕ್ಷಕ ರಂಗನಾಥರವರು ವಿಜ್ಞಾನ ಸಂಘ,ಮೀನಾ ಸಂಘ,ಭಾಷಾ ಸಂಘ,ಇಕೋ ಕ್ಲಬ್ ಇವುಗಳನ್ನು ರಚಿಸಿ ಜವಾಬ್ದಾರಿಯನ್ನು ತಿಳಿಸಿದರು. ಶಿಕ್ಷಕಿಯರಾದ ಸಂಧ್ಯಾ, ಪಲ್ಲವಿ, ಶಹನಾ, ರಂಸೀನಾ ಚುಣಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.










