






ನೆನಪಲ್ಲಿ ಉಳಿಯುವಂತಹ ಸೇವಾ ಬದುಕು ನಮ್ಮದಾಗಲಿ-ಡಾ.ಮೆಲ್ವಿನ್ ಡಿ’ಸೋಜ


ಪುತ್ತೂರು:ಮನುಷ್ಯ ದೇಶಕ್ಕೆ, ಸಮಾಜಕ್ಕೆ, ಪ್ರಕೃತಿಗೆ ಹಾನಿ ಮಾಡದೆ ಒಳ್ಳೆಯ ಕೆಲಸವನ್ನು ಮಾಡಬೇಕು. ಮನುಷ್ಯ ಹುಟ್ಟಿದ ಮೇಲೆ ಸಮಾಜದಲ್ಲಿ ನೆನಪಲ್ಲಿ ಉಳಿಯುವಂತಹ ಒಳ್ಳೆಯ ಸೇವಾ ಬದುಕು ನಮ್ಮದಾಗಬೇಕು. ಲಯನ್ಸ್ ಸದಸ್ಯರು ನೀಡುವ ದೇಣಿಗೆ ಅದು ವಿಶ್ವದಾದ್ಯಂತ ಮಾನವೀಯತೆಯ ಕೈಂಕರ್ಯ ಮಾಡುವುದಕ್ಕೆ ಉಪಯೋಗವಾಗುತ್ತದೆ ಎಂದು ಲಯನ್ಸ್ ಪಿಡಿಜಿ ಡಾ.ಮೆಲ್ವಿನ್ ಡಿ’ಸೋಜರವರು ಹೇಳಿದರು.




ಜು.8 ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ನಲ್ಲಿನ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ, ರೀಜ್ಹನ್ 7, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಇದರ 2026-27ನೇ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿದರು. ಲಯನ್ಸ್ ಕ್ರೌನ್ ಕ್ಲಬ್ ತಮ್ಮ ಸದಸ್ಯರಲ್ಲಿನ ಪ್ರೀತಿ, ವಿಶ್ವಾಸ ಹಾಗೂ ಅನ್ಯೋನ್ಯತೆಯಿಂದ ಜಿಲ್ಲೆಯಲ್ಲಿಯೇ ಉತ್ತಮ ಕ್ಲಬ್ ಎಂದು ಹೆಸರು ಗಳಿಸಿದೆ. ಕ್ಲಬ್ನ ಎಲ್ಲಾ ಆಯಾಮಗಳಲ್ಲೂ ಛಾಪು ಮೂಡಿಸಿದ ಹೊಸ ಕ್ಲಬ್ ಇದಾಗಿದೆ ಎಂದರು.
ಲಯನ್ಸ್ ಕ್ಲಬ್ ವಿಶ್ವದಲ್ಲೇ ಅತೀ ದೊಡ್ಡ ಸೇವಾ ಸಂಸ್ಥೆ-ಸ್ವರೂಪ ಶೆಟ್ಟಿ:
ಕ್ಲಬ್ ಚಾರ್ಟರ್ ನೈಟ್ ಸೆಲೆಬ್ರೇಶನ್ ಅನ್ನು ಜಿಲ್ಲಾ ಸಾಂಸ್ಕೃತಿಕ ಚೀಫ್ ಕೋ-ಆರ್ಡಿನೇಟರ್ ಸ್ವರೂಪ ಶೆಟ್ಟಿರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಚಾರ್ಟರ್ ನೈಟ್ ಸೆಲೆಬ್ರೇಶನ್ ಅನ್ನುವುದು ವಾರ್ಷಿಕ ಆಚರಣೆ ಅಲ್ಲ, ಅದು ಕ್ಲಬ್ ಜನ್ಮದಿನವಾಗಿದೆ. ಲಯನ್ಸ್ ಇಂಟರ್ನ್ಯಾಷನಲ್ ಕ್ಲಬ್ ವಿಶ್ವದಲ್ಲೇ ಅತೀ ದೊಡ್ಡ ಸೇವಾ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಕ್ಲಬ್ಗಳನ್ನು ಆರಂಭಿಸುವುದು ಸುಲಭ ಆದರೆ ಅದನ್ನು ಮುನ್ನೆಡೆಸಿಕೊಂಡು ಹೋಗುವುದೇ ಸವಾಲಾಗಿದೆ. ಲಯನ್ಸ್ ಕ್ರೌನ್ ಸಣ್ಣ ಅವಧಿಯಲ್ಲಿಯೇ ಸೇವಾ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಉತ್ತಮ ಕ್ಲಬ್ ಎಂದು ಮೂಡಿಸಿಕೊಂಡಿದೆ ಎಂದರು.

ನನ್ನ ಅವಧಿಯಲ್ಲಿ ಕ್ಲಬ್ಗೆ ಜಿಲ್ಲೆಯಲ್ಲಿ ೬ನೇ ಸ್ಥಾನ-ಅಂತೋನಿ ಒಲಿವೆರಾ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಅಂತೋನಿ ಒಲಿವೆರಾ ಮಾತನಾಡಿ, ಒಂದು ವರ್ಷ ಕ್ಲಬ್ನ ಚುಕ್ಕಾಣಿಯೊಂದಿಗೆ ವಿವಿಧ ಸಮಾಜಮುಖಿ ಸೇವೆಗಳನ್ನು ಮಾಡಲು ಕ್ಲಬ್ ಸದಸ್ಯರ ಸಹಕಾರಕ್ಕೆ ಜೊತೆಗೆ ಲಯನ್ಸ್ ಕ್ರೌನ್ ಕ್ಲಬ್ನ್ನು ಹುಟ್ಟು ಹಾಕಿದ ಲ್ಯಾನ್ಸಿ ಮಸ್ಕರೇನ್ಹಸ್ ದಂಪತಿಗೆ ಕೃತಜ್ಞತೆಗಳು. ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲೀನಾ ಮಚಾದೋರವರ ತಂಡದ ಜೊತೆ ನಾವಿದ್ದೇವೆ. ಸಮಾಜ ಸೇವೆ ಹಾಗೂ ಸದಸ್ಯತನದ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಆರನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ಹೇಳಿ ಕ್ಲಬ್ ಸದಸ್ಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದರು.
ಸಮಾಜಸೇವೆಯೊಂದಿಗೆ ಕ್ಲಬ್ ಮತ್ತೂ ಎತ್ತರಕ್ಕೇರಲಿ-ಮಂಗೇಶ್ ಭಟ್:
ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಮಂಗೇಶ್ ಭಟ್ ಮಾತನಾಡಿ, ಪುತ್ತೂರಿನ ಮುತ್ತಿನಂತಹ ಈ ಲಯನ್ಸ್ ಪುತ್ತೂರು ಕ್ರೌನ್ ಕ್ಲಬ್ ಸಮಾಜಮುಖಿ ಕಾರ್ಯದಲ್ಲಿ ಮೂರೇ ವರ್ಷದಲ್ಲಿ ಜಿಲ್ಲೆಯಲ್ಲಿ ಆರನೇ ಸ್ಥಾನ ಗಳಿಸಿಕೊಂಡಿರುವುದು ನಿರ್ಗಮಿತ ಅಧ್ಯಕ್ಷ ಅಂತೋನಿ ಒಲಿವೆರಾರವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ನೂತನ ಅಧ್ಯಕ್ಷೆ ಲೀನಾ ಮಚಾದೋರವರ ತಂಡ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತೂ ಎತ್ತರಕ್ಕೆ ಕ್ಲಬ್ನ್ನು ಕೊಂಡೊಯ್ಯಬೇಕಿದೆ ಎಂದರು.
ಸೇವಾ ಕಾರ್ಯದಲ್ಲಿ ಕ್ಲಬ್ ಟಾಪ್ ವನ್ ಆಗಿ ಪ್ರಜ್ವಲಿಸಲಿ-ರಜಿತ್ ಆಳ್ವ:
ಲಯನ್ಸ್ ವಲಯಾಧ್ಯಕ್ಷ ರಜಿತ್ ಆಳ್ವ ಮಾತನಾಡಿ, ನಿರ್ಗಮಿತ ಅಧ್ಯಕ್ಷ ಅಂತೋನಿ ಒಲಿವೆರಾರವರ ತಂಡ ಇಡೀ ವರ್ಷ ಅಭೂತಪೂರ್ವ ಸಾಧನೆ ಮಾಡಿರುವುದು ಖುಶಿ ತಂದಿದೆ. ನೂತನ ಅಧ್ಯಕ್ಷೆ ಲೀನಾ ಮಚಾದೋರವರು ಅಧ್ಯಕ್ಷ ಪದವಿ ಸ್ವೀಕರಿಸಿದ ದಿನವೇ ಆರು ಮಂದಿ ಹೊಸ ಸದಸ್ಯರು ಸೇರ್ಪಡೆಗೊಂಡಿರುವುದು ಉತ್ತಮ ಬೆಳವಣಿಗೆ. ನನ್ನ ವಲಯಾಧ್ಯಕ್ಷ ವ್ಯಾಪ್ತಿಯಡಿ ಮೂರು ಕ್ಲಬ್ಗಳು ಬರುತ್ತಿದ್ದು ಸೇವಾ ಕಾರ್ಯದಲ್ಲಿ ಕ್ಲಬ್ ಟಾಪ್ ವನ್ ಆಗಿ ಪ್ರಜ್ವಲಿಸಲಿ ಎಂದರು.

ಕ್ಲಬ್ನಿಂದ ಜಾಗೃತಿ ಹಾಗೂ ಸೇವಾ ಕಾರ್ಯಗಳು ಕ್ಲಬ್ ಹಿರಿಮೆಯಾಗಿದೆ-ಹೇಮನಾಥ ಶೆಟ್ಟಿ:
ಲಯನ್ಸ್ ನಿಕಟಪೂರ್ವ ಜಿಲ್ಲಾ ಅಂಬಾಸಿಡರ್ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕ್ರೌನ್ ಕ್ಲಬ್ ಕಳೆದ ಮೂರು ವರ್ಷಗಳಲ್ಲಿ ಅನೇಕ ಜಾಗೃತಿ ಕಾರ್ಯಗಳು ಹಾಗೂ ಸೇವಾ ಕಾರ್ಯಗಳನ್ನು ಒಗ್ಗಟ್ಟಾಗಿ ಆಚರಿಸುತ್ತಾ ಬಂದಿರುವ ಫಲವಾಗಿ ಕ್ಲಬ್ಗೆ ಜಿಲ್ಲೆಯಿಂದ ಆರನೇ ಸ್ಥಾನ ಪ್ರಾಪ್ತವಾಗಿರುವುದು ಕ್ಲಬ್ನ ಹಿರಿಮೆಯಾಗಿದೆ. ಮುಂದಿನ ದಿನಗಳಲ್ಲೂ ಕ್ಲಬ್ ಮತ್ತಷ್ಟು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು.
ಒಗ್ಗೂಡಿಸಿಕೊಂಡು, ಸಂತೋಷದಿಂದ ಸಾಗಿದ್ದಲ್ಲಿ ಕ್ಲಬ್ ಯಶಸ್ವಿಯತ್ತ-ಲ್ಯಾನ್ಸಿ ಮಸ್ಕರೇನ್ಹಸ್:
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸ್ಥಾಪಕರಾದ ಲ್ಯಾನ್ಸಿ ಮಸ್ಕರೇನ್ಹಸ್ ಮಾತನಾಡಿ, ಈ ಕ್ಲಬ್ ಹುಟ್ಟು ಹಾಕಿದ ದಿನದಿಂದ ನನಗೆ ಏನೋ ಭಯ, ಕ್ಲಬ್ ಹೇಗೆ ನಡೆಯುತ್ತದೆ ಎಂದು. ಆದರೆ ಇದೀಗ ಮನಸ್ಸು ನಿರಾಳವಾಗಿದೆ. ನಾನು ಊಹಿಸಿಕೊಳ್ಳದಷ್ಟು ಕ್ಲಬ್ ಉತ್ತಮ ರೀತಿಯಲ್ಲಿ ಸಾಗುತ್ತಿರುವುದು ಸಂತೋಷ ತಂದಿದೆ. ನಾವು ಎಲ್ಲರನ್ನೂ ಒಗ್ಗೂಡಿಸಿಕೊಂಡು, ಒಂದೇ ಮನೋಭಾವದಿಂದ ಹಾಗೂ ಸಂತೋಷದಿಂದ ಸಾಗಿದ್ದಲ್ಲಿ ಕ್ಲಬ್ ಯಶಸ್ವಿಯತ್ತ ಸಾಗಬಲ್ಲುದು.
ಕ್ಲಬ್ನಿಂದ ಗುರುತಿಸುವಂತಹ ಸೇವಾ ಕಾರ್ಯಗಳು ಶ್ಲಾಘನೀಯ-ಸುದರ್ಶನ್ ಪಡಿಯಾರ್:
ಲಯನ್ಸ್ ನಿಕಟಪೂರ್ವ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ಮಾತನಾಡಿ, ಕಳೆದ ವರ್ಷ ಅಂತೋನಿ ಒಲಿವೆರಾರವರ ನೇತೃತ್ವದಲ್ಲಿ ತಂಡವು ಉತ್ತಮ ಸಾಧನೆ ಮೆರೆದಿದೆ. ಪ್ರಸ್ತುತ ಲೀನಾ ಮಚಾದೋರವರ ತಂಡವು ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿಯೇ ಟಾಪ್ 5ರೊಳಗಿನ ಸ್ಥಾನ ಪಡೆಯುವಂತಾಗಲಿ ಎಂದರು.
ಸದಸ್ಯರ ಸೇರ್ಪಡೆ:
ಕ್ಲಬ್ಗೆ ನೂತನ ಸದಸ್ಯರಾದ ಲ್ಯಾನ್ಸಿ ವೇಗಸ್ ದರ್ಬೆ, ಸುನಿಲ್ ಬ್ರ್ಯಾಗ್ಸ್ ಉಪ್ಪಿನಂಗಡಿ, ರೋಶನ್ ಮೊರಾಸ್ ಉಪ್ಪಿನಂಗಡಿ, ರೋಯ್ಸ್ಟನ್ ಡಾಯಸ್ ಎಪಿಎಂಸಿ ರಸ್ತೆ, ಆಲ್ವಿನ್ ವಿಲ್ಫ್ರೆಡ್ ಮಚಾದೋ ಬನ್ನೂರು, ಡೊರತಿ ಮಿನೇಜಸ್ ದರ್ಬೆರವರುಗಳನ್ನು ಪಿಡಿಜಿ ಡಾ.ಮೆಲ್ವಿನ್ ಡಿ’ಸೋಜರವರು ಪ್ರಮಾಣವಚನ ಬೋಧಿಸುವ ಮೂಲಕ ಕ್ಲಬ್ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.

ಸೇವಾ ಚಟುವಟಿಕೆಗಳು:
ಬೊಳ್ವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟೇಬಲ್ ಫ್ಯಾನ್, ಅನಾರೋಗ್ಯದಿಂದ ಬಳಲುತ್ತಿರುವ ಅನಿತಾ ಪ್ರಿಯಾ ಡಿ’ಸೋಜರವರ ಔಷಧಿ ವೆಚ್ಚಕ್ಕೆ ರೂ,5 ಸಾವಿರ ಸಹಾಯಧನ, ಬನ್ನೂರು ಸಂತ ಅಂತೋನಿ ಚರ್ಚ್ ವಾರ್ಷಿಕ ಹಬ್ಬದ ಪ್ರಯುಕ್ತ ನೊವೆನಾ ಸಮಯದಲ್ಲಿ ಮೇ 31ರಿಂದ ಜೂನ್ 12ವರೆಗೆ ಲಯನ್ ಸದಸ್ಯರು ನೀಡಿದ ಕಾಫಿ ಫಲಾಹಾರ ಹಾಗೂ ಅನ್ನ ಸಂತರ್ಪಣೆಗೆ ರೂ.65 ಸಾವಿರ ದೇಣಿಗೆಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಕ್ಲಬ್ ಸದಸ್ಯರಾದ ಲೀನಾ ರೇಗೊ, ಜೆಸಿಂತ ಪಿರೇರಾ, ಮೋಲಿ ಪಿಂಟೊರವರು ಪ್ರಾರ್ಥಿಸಿದರು. ಬೆಂಜಮಿನ್ ಡಿ’ಸೋಜರವರು ನೀತಿ ಸಂಹಿತೆಯನ್ನು, ಅನಿತಾ ಡಿ’ಸೋಜರವರು ಧ್ವಜವಂದನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸದಸ್ಯರಾದ ಲೀನಾ ರೇಗೊ, ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ಜೆಸಿಂತ ಪಿರೇರಾ, ವಿಕ್ಟರ್ ಶರೋನ್ ಡಿ’ಸೋಜ, ಪ್ರಿಯಲತಾ ಡಿ’ಸಿಲ್ವರವರು ಅತಿಥಿಗಳ, ಸನ್ಮಾನಿತರ ಪರಿಚಯ ಮಾಡಿದರು.
ಮಾನವೀಯತೆ ಸೇವೆಗೆ ಒಗ್ಗಟ್ಟಾಗಿ ಕೆಲಸ…
ಕ್ಲಬ್ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಪದವಿಯ ಜವಾಬ್ದಾರಿಯನ್ನು ನೀಡಿದ್ದು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಇದು ಕೇವಲ ಹುದ್ದೆಯಲ್ಲ, ಬದಲಾಗಿ ಅದು ಸಮಾಜ ಸೇವೆಯಾಗಿದ್ದು, ಕ್ಲಬ್ ಅನ್ನು ಉನ್ನತ ಮಟ್ಟಕ್ಕೇರಿಸಲು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಆರೋಗ್ಯ, ಶಿಕ್ಷಣ, ಪರಿಸರ ರಕ್ಷಣೆಯ ಅಭಿವೃದ್ಧಿ, ಮಹಿಳಾ ಸಬಲೀಕರಣದಲ್ಲಿ ಮಾನವೀಯತೆಯ ಸೇವೆ ಮಾಡಲು ನಾವು ಒಗ್ಗಟ್ಟಾಗಿ, ಪ್ರೀತಿಯಿಂದ ಕೆಲಸ ಮಾಡೋಣ.
-ಲೀನಾ ಮಚಾದೋ, ನೂತನ ಅಧ್ಯಕ್ಷೆ, ಲಯನ್ಸ್ ಪುತ್ತೂರು ಕ್ರೌನ್

ಜಿಲ್ಲೆಯಲ್ಲಿ 6ನೇ ಸ್ಥಾನ..
ಜಿಲ್ಲೆಯಲ್ಲಿನ ಐದು ವರ್ಷಗಳ ಒಳಗಿನ ಕ್ಲಬ್ಗಳಲ್ಲಿ ಸದಸ್ಯತನ ಹೆಚ್ಚಳ ಹಾಗೂ ಸಮಾಜ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಮೂರನೇ ವರ್ಷದಲ್ಲಿಯೇ ಜಿಲ್ಲೆಯಲ್ಲಿಯೇ 6ನೇ ಸ್ಥಾನವನ್ನು ಪಡೆದುಕೊಂಡಿರುವುದು ಹೆಗ್ಗಳಿಕೆಯಾಗಿದ್ದು, ಪಿಡಿಜಿ ಡಾ.ಮೆಲ್ವಿನ್ ಡಿ’ಸೋಜರವರು ಟ್ರೋಫಿಯನ್ನು ನಿರ್ಗಮಿತ ಅಧ್ಯಕ್ಷ ಅಂತೋನಿ ಒಲಿವೆರಾರವರಿಗೆ ಹಸ್ತಾಂತರಿಸಿದರು. ನಿರ್ಗಮಿತ ಅಧ್ಯಕ್ಷ ಅಂತೋನಿ ಒಲಿವೆರಾರವರು ಅಂತರ್ರಾಷ್ಟ್ರೀಯ ಎಲ್ಸಿಐಎಫ್ ಫಂಡ್ಗೆ 80 ಡಾಲರ್ ನೀಡುವ ಮೂಲಕ ಎಂಜೆಎಫ್ ಪದವಿ ಪಡೆದ ಕ್ಲಬ್ನ ಮೊದಲಿಗರಾಗಿದ್ದಾರೆ.
ಸನ್ಮಾನ..
ಲಯನ್ಸ್ ಪಿಡಿಜಿ ಡಾ.ಮೆಲ್ವಿನ್ ಡಿ’ಸೋಜ, ಜಿಲ್ಲಾ ಸಾಂಸ್ಕೃತಿಕ ಚೀಫ್ ಕೋ-ಆರ್ಡಿನೇಟರ್ ಸ್ವರೂಪ ಶೆಟ್ಟಿ, ಡಾಕ್ಟರ್ಸ್ ಡೇ ಪ್ರಯುಕ್ತ ಡಾ.ರಂಜಿತಾ ಶೆಟ್ಟಿ, ಸಿಇಟಿ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದ ವಿಶಾಲ್ ಪಿ, ಕಳೆದ ವರ್ಷ ಯಶಸ್ವಿಯಾಗಿ ಕ್ಲಬ್ ಅನ್ನು ಮುನ್ನೆಡೆಸಿದ ನಿರ್ಗಮಿತ ಅಧ್ಯಕ್ಷ ಅಂತೋನಿ ಒಲಿವೆರಾ, ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ, ಕ್ಲಬ್ ಸ್ಥಾಪಕರಾದ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ಪ್ರಿಯಲತಾ ಡಿ’ಸಿಲ್ವ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪದ ಪ್ರದಾನ…
ಕ್ಲಬ್ ನೂತನ ಅಧ್ಯಕ್ಷೆ ಲೀನಾ ಮಚಾದೋ, ಕಾರ್ಯದರ್ಶಿ ನಿಶಾ ಮಿನೇಜಸ್, ಕೋಶಾಧಿಕಾರಿ ಐವನ್ ಬ್ಯಾಪ್ಟಿಸ್ಟ್ ಫೆರ್ನಾಂಡೀಸ್ , ಪ್ರಥಮ ಉಪಾಧ್ಯಕ್ಷ ವಿಕ್ಟರ್ ಶರೋನ್ ಡಿ’ಸೋಜ, ನಿಕಟಪೂರ್ವ ಅಧ್ಯಕ್ಷ ಅಂತೋನಿ ಒಲಿವೆರಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಲ್ಮಾ ಗೊನ್ಸಾಲ್ವಿಸ್, ಸರ್ವಿಸ್ ಚೇರ್ ಪರ್ಸನ್ ಐರಿನ್ ಡಿ’ಸೋಜ, ಮೆಂಬರ್ ಶಿಪ್ ಚೇರ್ ಪರ್ಸನ್ ಜೆಸಿಂತಾ ಪಿರೇರಾ, ಎಲ್.ಸಿ.ಐ.ಎಫ್ ಕೋ-ಆರ್ಡಿನೇಟರ್ ಅನಿತಾ ಜ್ಯೋತಿ ಡಿ’ಸೋಜ, ಟೇಲ್ ಟ್ವಿಸ್ಟರ್ ಬೆಂಜಮಿನ್ ಡಿ’ಸೋಜ, ಟೇಮರ್ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ಮಾರ್ಕೆಟಿಂಗ್ ಚೇರ್ ಪರ್ಸನ್ ಪ್ರಿಯಲತಾ ಡಿ’ಸಿಲ್ವ, ಜೊತೆ ಕಾರ್ಯದರ್ಶಿ ಮೋಲಿ ಪಿಂಟೊ, ನಿರ್ದೇಶಕರುಗಳಾದ ಲೀನಾ ರೇಗೊ, ಮೋನಿಕಾ ಪಿ.ಮಾಡ್ತಾ, ಜೋಸೆಫ್ ಮಸ್ಕರೇನ್ಹಸ್, ರೋಯಿಸ್ಟನ್ ಡಾಯಸ್ ರವರಿಗೆ ಪದ ಪ್ರದಾನ ಅಧಿಕಾರಿ ಡಾ.ಮೆಲ್ವಿನ್ ಡಿ’ಸೋಜರವರು ಪದ ಪ್ರದಾನ ನೆರವೇರಿಸಿದರು.










