ಹಳೆನೇರಂಕಿ: ಟ್ರಾನ್ಸ್‌ಫಾರ್ಮರ್ ರಿಪೇರಿ ವೇಳೆ ವಿದ್ಯುತ್ ಅವಘಡ- ಪವರ್ ಮ್ಯಾನ್ ಪ್ರಾಣಪಾಯದಿಂದ ಪಾರು

0

ಆಲಂಕಾರು:ಹಳೆನೇರಂಕಿ ಗ್ರಾಮದ ಮರಂಕಡಿ ಎಂಬಲ್ಲಿ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುತ್ತಿದ್ದ ವೇಳೆ ಎಲ್.ಟಿ ಲೈನ್‌ನಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹರಿದು ಬಂದ ಪರಿಣಾಮ ವಿದ್ಯುತ್ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಪವರ್ ಮ್ಯಾನ್ ಮಂಜುನಾಥ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ:
ವಿದ್ಯುತ್ ಬಳಕೆದಾರರ ಕರೆಯ ಹಿನ್ನೆಲೆಯಲ್ಲಿ ಆಲಂಕಾರು ಸೆಕ್ಷನ್‌ನ ಪವರ್ ಮ್ಯಾನ್ ಮಂಜುನಾಥ ಅವರು ಹಳೆನೇರಂಕಿ ಗ್ರಾಮದ ಮರಂಕಡಿಯಲ್ಲಿ ಜಿ.ಒ.ಎಸ್ ಯನ್ನು ಆಫ್ ಮಾಡಿ ಟ್ರಾನ್ಸ್‌ಫಾರ್ಮರ್ ಸರಿಪಡಿಸುತ್ತಿದ್ದರು. ಈ ವೇಳೆ ಯಾರದ್ದೋ ಮನೆಯ ಇನ್ವರ್ಟರ್‌ನಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಮಂಜುನಾಥ ಅವರು ಶಾಕ್‌ಗೆ ಒಳಗಾಗಿ ಕೆಳಗೆ ಬಿದ್ದಿದ್ದಾರೆ.

ತಕ್ಷಣದ ನೆರವು:
ಘಟನೆ ನಡೆದ ತಕ್ಷಣ ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ ರವರು ಸ್ಥಳಕ್ಕೆ ಧಾವಿಸಿ ಗಾಯಾಳು ಮಂಜುನಾಥರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈಗ ಗಾಯಾಳು ಮಂಜುನಾಥ್ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here