






ಪುತ್ತೂರು : ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಕೃತಿಯ ಮಹತ್ವವನ್ನು ಹೇಳುವ ಗೀತೆಯೊಂದಿಗೆ, ಪ್ರಕೃತಿ ಮತ್ತು ಮಾನವನ ಸಂಬಂಧದ ಮತ್ತು ಪ್ರಕೃತಿಯ ಮಹತ್ವವನ್ನು ತಿಳಿಸಲಾಯಿತು.


ಮುಖ್ಯ ಶಿಕ್ಷಕರು ಪ್ರಕೃತಿಯನ್ನು ನಾವು ಏಕೆ ರಕ್ಷಣೆ ಮಾಡಬೇಕು ಅದರ ಅವಶ್ಯಕತೆ ಏನು ಎಂಬುದನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರು ಮತ್ತು ಗುರುಗಳು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.













