






ಪುತ್ತೂರು: ಕಣಚೂರು ಹಾಸ್ಪಿಟಲ್ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಹಾಜಿ ಯು.ಕೆ.ಮೋನು ಕಣಚೂರು ಅವರ ಹುಟ್ಟುಹಬ್ಬದ ಪ್ರಯುಕ್ತ ಕಣಚೂರು ಫೌಂಡೇಶನ್ ಡೇ ಇದರ ಸಲುವಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ಹಾಗೂ ರೋಗಿಗಳಿಗೆ ಮತ್ತು ಜೊತೆಗಿರುವವರಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಡಾ. ಹಾಜಿ ಯು.ಕೆ ಮೋನು ಇವರ ಹುಟ್ಟು ಹಬ್ಬವನ್ನು ವಿಶೇಷ ರೀತಿಯಿಂದ ಆಚರಣೆ ಮಾಡಲಾಯಿತು.



ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಮೆಡಿಕಲ್ ಆಫೀಸರ್ ಡಾ.ಯಧುರಾಜ್, ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಉನೈಸ್, ಆದ್ಯ ಗ್ರೂಪ್ ಮಾಲಕ ಅಶೋಕ್ ರಾವ್ ಬಪ್ಪಳಿಗೆ, ನೀರಜ್ ಮರೀಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶೇಖರ್ , ಹನೀಫ್ ಪಾಟ್ರಕೋಡಿ, ಸಮರ್ಪಣಾ ಮಹಿಳಾ ಮಂಡಳಿ ಅಧ್ಯಕ್ಷೆ ಶಾರದ ಅರಸು, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶುಭ ಮಾಲಿನಿ, ಸಮರ್ಪಣ ಮಹಿಳಾ ಮಂಡಳಿ ಕಾರ್ಯದರ್ಶಿ ಸುಜಯ ರೈ ಸಹಿತ ಅನೇಕರು ಹಾಜರಿದ್ದರು.












