






ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ (ರಿ ) ಪುತ್ತೂರು ಇದರ ನೂತನ ಪದಾಧಿಕಾರಿಗಳಿಂದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಮಂಗಳೂರು ಇಲ್ಲಿನ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯಯವರನ್ನು ಭೇಟಿ ಮಾಡಿ ಗೌರವಿಸಿ, ಆಶೀರ್ವಾದ ಪಡೆಯಲಾಯಿತು.



ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೂತನ ಅಧ್ಯಕ್ಷರಾದ ವಿಶ್ವನಾಥ ಗೌಡ ಬನ್ನೂರು, ಉಪಾಧ್ಯಕ್ಷರಾದ ದಿವ್ಯೆಶ್ ಗೌಡ ಕಲ್ಯ, ಕೋಶಾಧಿಕಾರಿ ಚೆನ್ನಪ್ಪ ಗೌಡ ಕುದುಮಾನ್, ನಿರ್ದೇಶಕರುಗಳಾದ ಎ ವಿ ನಾರಾಯಣ ಗೌಡ , ದಿವ್ಯಪ್ರಸಾದ್ ಎ ಎಮ್, ಆನಂದ ಗೌಡ ಮೂವಪ್ಪು, ಪುರುಷೋತ್ತಮ ಗೌಡ ಮುಂಗ್ಲಿಮನೆ, ಕುದ್ವ ಲೋಕನಾಥ ಗೌಡ ಕೆಮ್ಮಿಂಜೆ , ಸುರೇಶ್ ಗೌಡ ಪುಣಚ, ಗೌರಿ ಬನ್ನೂರು, ತುಳಸಿ ದೇರಣ್ಣ ಗೌಡ ಉಪಸ್ಥಿತರಿದ್ದರು.













