ವೀರಮಂಗಲ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಹಾಗೂ ಅಧಿಕಾರಿಗಳ ತಂಡದ ಭೇಟಿ

0

ಪುತ್ತೂರು: ವೀರಮಂಗಲ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಶಾಲೆಯ ವಿವಿಧ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಲೆಯ ಬಾಲವಾಟಿಕಾ ತರಗತಿಗಳು, ಗಣಿತದ ಅನುಭವಾತ್ಮಕ ಕಲಿಕಾ ಚಟುವಟಿಕೆಗಳು, ಮಿಯಾವಾಕಿ ವನ, ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಶಿಕ್ಷಕರ ಸೃಜನಶೀಲ ಬೋಧನಾ ವಿಧಾನಗಳು ಹಾಗೂ ಶಾಲೆಯಲ್ಲಿ ರೂಪುಗೊಂಡಿರುವ ಹಸಿರು ಪರಿಸರವನ್ನು ವೀಕ್ಷಿಸಿ ಪಿಎಂಶ್ರೀ ಯೋಜನೆಯ ಆಶಯಕ್ಕೆ ಅನುಗುಣವಾಗಿ ಶಾಲೆ ಉತ್ತಮ ಕಾರ್ಯನಿರ್ವಹಿಸುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.ಬಿಸಿಯೂಟದ ಗುಣಮಟ್ಟ ಮತ್ತು ವ್ಯವಸ್ಥೆಯನ್ನು ಪರಿಶೀಲಿಸಿದರು.
ಶಾಲಾ ಮುಖ್ಯಗುರು ತಾರಾನಾಥ ಸವಣೂರು ಅವರು ಶಾಲೆಯ ಸಾಧನೆಗಳು, ಪಿಎಂಶ್ರೀ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಾಕುಮಾರಿ ನರಿಮೊಗರು ಹಾಗೂ ಸಿಆರ್‌ಪಿ ಪರಮೇಶ್ವರಿ, ಶಿಕ್ಷಕರಾದ ಶೋಭಾ, ಶಿಲ್ಪರಾಣಿ, ಸೌಮ್ಯ, ಹೇಮಾವತಿ, ಪ್ರಮಿಳಾ, ಮಲ್ಲಿಕಾ, ಕುಬ್ರಾ, ಸವಿತಾ, ಸಂಚನಾ ಹಾಗೂ ಚಂದ್ರಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here