ನಾಳೆ (ಜು.16) ಬೊಳುವಾರು ಕ್ಷೇತ್ರದಲ್ಲಿ ಉಗ್ರಾಣ ಭರಣ ಕಾರ್ಯಕ್ರಮ : ಜು.17ರಿಂದ ಆಟಿ ತಿಂಗಳ ವಿಶೇಷ ಪೂಜೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆಶಾಢ ಮಾಸ (ಆಟಿ ತಿಂಗಳ) ಪ್ರಯುಕ್ತ ಕ್ಷೇತ್ರದಲ್ಲಿ ಕಲ್ಪೋಕ್ಷ ಸಹಿತ ವಿಶೇಷ ದುರ್ಗಾಪೂಜೆ, ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆಯು ಜು.17ರಿಂದ ಆ.17ರ ವರೆಗೆ ನಡೆಯಲಿದೆ.


ಈ ವರ್ಷ ವಿಶೇಷವಾಗಿ ಹಸಿರುವಾಣಿ ಹೊರೆಕಾಣಿಕೆ ನಡೆಸಲಾಗಿದ್ದು ಆ ಪ್ರಯುಕ್ತ ಜು.16ರಂದು ಬೆಳಿಗ್ಗೆ ಕ್ಷೇತ್ರದಲ್ಲಿ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಉಗ್ರಾಣ ಭರಣ ಕಾರ್ಯಕ್ರಮ ಜರುಗಲಿದ್ದು, ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬೇಳೆ, ಎಣ್ಣೆ, ಗ್ಯಾಸ್‌, ದಿನಸಿ, ಬಾಳೆಗೊನೆ, ತರಕಾರಿ ಮೊದಲಾದ ಹಸಿರುವಾಣಿಗಳನ್ನು ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಿಸಬಹುದಾಗಿದೆ. ಜು.17ರಿಂದ ಪ್ರತಿದಿನ ಸಂಜೆ ಗೀತಾ ಪಾರಾಯಣ, ಭಜನೆ ಬಳಿಕ ಮಹಾ ಮಂಗಳಾರತಿ ನಡೆಯಲಿದೆ. ಆ.17ರ ವರೆಗೆ ಕ್ಷೇತ್ರದಲ್ಲಿ ಆಟಿ ತಿಂಗಳ ಸೇವೆ ಮಾಡಲು ಅವಕಾಶವಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವೆ ಮಾಡುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here