ಉಪ್ಪಿನಂಗಡಿ: ಜನವಸತಿ ಪ್ರದೇಶದತ್ತ ಮುಖ ಮಾಡಿದ ಹೆಬ್ಬಾವು ಕಾಡಿಗೆ

0

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿಯ ಕಂಚಿಬೆಟ್ಟುವಿನ ಜನವಸತಿ ಪ್ರದೇಶಕ್ಕೆ ಬಂದ ಹೆಬ್ಬಾವನ್ನು ಸ್ಥಳೀಯ ಯುವಕರ ತಂಡ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ.


ಜು.15ರ ರಾತ್ರಿ ಸುಮಾರು 11ರ ಸುಮಾರಿಗೆ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯ ಕಂಚಿಬೆಟ್ಟು ಬಳಿ ಭಾರೀ ಗಾತ್ರದ ಹೆಬ್ಬಾವೊಂದು ರಸ್ತೆ ದಾಟುತ್ತಿದ್ದು, ಇಲ್ಲೆಲ್ಲಾ ಜನವಸತಿ ಪ್ರದೇಶಗಳಿದ್ದು, ಇದರಿಂದ ಅಪಾಯವನ್ನರಿತ ಸ್ಥಳೀಯ ಹಣ್ಣಿನ ವ್ಯಾಪಾರಿ ಜಾಯಿ ಹಾಗೂ ಸ್ಥಳೀಯ ಯುವಕರು ಸೇರಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ದೂರದ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here