ಬೆಳಂದೂರು ವಲಯ ಶಿವಳ್ಳಿ ಸಂಪದದ ವಾರ್ಷಿಕ ಮಹಾಸಭೆ – ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಸತ್ಯನಾರಾಯಣ ಕಲ್ಲೂರಾಯ ಚಾರ್ವಾಕ, ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ಉಪಾಧ್ಯಾಯ ಕಲ್ಪಡ

ಕಾಣಿಯೂರು: ಶಿವಳ್ಳಿ ಸಂಪದ ಬೆಳಂದೂರು ವಲಯ ಇದರ ವಾರ್ಷಿಕ ಮಹಾಸಭೆಯು ಜು 15ರಂದು ಕಾಣಿಯೂರು ಮಠದಲ್ಲಿ ವಲಯಾಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಿವಳ್ಳಿ ಸಂಪದ ತಾಲೂಕು ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿ ರಂಗನಾಥ ಉಂಗ್ರುಪುಳಿತ್ತಾಯ ಇವರು ಮಾರ್ಗದರ್ಶನ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ಚಿದಾನಂದ ಉಪಾಧ್ಯಾಯ ಇದುವರೆಗಿನ ಸಂಪದದ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮುಂದೆಯೂ ಸಹಕಾರವನ್ನು ಅಗತ್ಯ ಎಂದರು. ಸಭೆಯಲ್ಲಿ ಮಹಿಳಾ ಸಂಪದದ ಅಧ್ಯಕ್ಷರಾದ ಪೂರ್ಣಿಮಾ ಉಪಾಧ್ಯಾಯ ಇವರು ಎಲ್ಲಾ ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು


ಸಂಪದದ ಉಪಾಧ್ಯಕ್ಷರಾದ ಶ್ರೀ ಹರಿ ಭಟ್ ಶೇರ, ಟಿ.ಎಸ್.ಆಚಾರ್ ತುಂಬ್ಯ, ಅನಂತರಾಮ ಉಪಾಧ್ಯಾಯ, ದಿನೇಶ ಉಪಾಧ್ಯಾಯ, ಕಾಣಿಯೂರು ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್, ಬಾಲಕೃಷ್ಣ ಅಸ್ರಣ್ಣ, ಸುಮಿತ್ , ರಾಘವೇಂದ್ರ ಬೈಪಡಿತ್ತಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ಸರ್ವೇಶ ಹೆಬ್ಬಾರ್, ಕಾರ್ತಿಕ್ ಉಪಾಧ್ಯಾಯ, ಮುರಳಿಕೃಷ್ಣ, ಲತಾ, ಸುಜಾತ ಕಜೆ, ಅಂಜನಾ ಕಜೆ, ವಸಂತಿ ಕಜೆ ಉಪಸ್ಥಿತರಿದ್ದರು.ಕಲ್ಪನಾ ಕಲ್ಲೂರಾಯ ಮತ್ತು ಶ್ರೀಲಕ್ಷ್ಮಿ ಉಪಾಧ್ಯಾಯ ಪ್ರಾರ್ಥಿಸಿದರು. ವಲಯ ಕಾರ್ಯದರ್ಶಿ ಪ್ರಶಾಂತ ಪರ್ಲತ್ತಾಯ ಇವರು ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು.

ಮಹಿಳಾ ಸಂಪದದ ಕಾರ್ಯದರ್ಶಿ ಇಂದಿರಾ ಬಿ.ಕೆ ವರದಿ ಮಂಡಿಸಿದರು. ಸಂಪದದ ಶಿವಳ್ಳಿ ಅಭಿವೃದ್ಧಿ ಟ್ರಸ್ಟ್ ನ ಬಗ್ಗೆ ಚರ್ಚಿಸಲಾಯಿತು. ಪ್ರಶಾಂತ ಪರ್ಲತ್ತಾಯ ವಂದಿಸಿದರು.


ಪದಾಧಿಕಾರಿಗಳ ಆಯ್ಕೆ:
ಬೆಳಂದೂರು ವಲಯ ಶಿವಳ್ಳಿ ಸಂಪದದ 2026-2028ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಸತ್ಯನಾರಾಯಣ ಕಲ್ಲೂರಾಯ ಚಾರ್ವಾಕ, ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ಉಪಾಧ್ಯಾಯ, ಕೋಶಾಧಿಕಾರಿಯಾಗಿ ಗಣೇಶ ನಿಡ್ವಣ್ಣಾಯ, ವಲಯದ ಕೇಂದ್ರ ಪ್ರತಿನಿಧಿಯಾಗಿ ನಾಗರಾಜ ನಿಡ್ವಣ್ಣಾಯ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here