







ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ಸದಸ್ಯರಾದ ಕುಶಾಲಪ್ಪ ಗೌಡ ಪಾಲ್ತಿಲ ರವರು ಇತ್ತೀಚಿಗೆ ನಿಧನರಾಗಿದ್ದು, ಇವರ ಪತ್ನಿ ಭುವನೇಶ್ವರಿರವರಿಗೆ ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಧನ ಸಹಾಯದ ಚೆಕ್ ನ್ನು ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕರವರು ಸಂಘದ ಪ್ರಧಾನ ಕಛೇರಿ ಕಾಣಿಯೂರುನಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಫದ ಉಪಾಧ್ಯಕ್ಷರಾದ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ರಮೇಶ್ ಉಪ್ಪಡ್ಕ, ಸುಂದರ ದೇವಸ್ಯ, ಪರಮೇಶ್ವರ ಅನಿಲ, ದಿವಾಕರ ಮರಕ್ಕಡ, ಲೋಕೇಶ್ ಆತಾಜೆ, ಶೀಲಾವತಿ ಮುಗರಂಜ, ವೀಣಾ ಅಂಬುಲ, ದ. ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪುತ್ತೂರು 2ನೇ ವಲಯ ಮೇಲ್ವಿಚಾರಕರಾದ ವಸಂತ್,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ ರವರು ಉಪಸ್ಥಿತರಿದ್ದರು.












