






ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ(ರಿ) ಸಿಟಿಗುಡ್ಡೆ ಪುತ್ತೂರು ವತಿಯಿಂದ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗಾಗಿ 30,500 ರೂಪಾಯಿ ಸಹಾಯಧನ ಹಸ್ತಾಂತರಿಸಲಾಯಿತು.


ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 74ನೇ ಯೋಜನೆಯ ಜೂನ್ ತಿಂಗಳ ಸಹಾಯಧನ ಇದಾಗಿದೆ. ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿಗಳಾದ ಯೋಗೀಶ್ ಆಚಾರ್ಯ ಹಾಗೂ ಸುಮಲತಾ ದಂಪತಿಗಳ ಪುತ್ರಿ ಧ್ರುವಿ ಪ್ರಸವ ಪೂರ್ವದಲ್ಲಿ ಜನಿಸಿದ ಮಗುವಾಗಿದ್ದು, ಅನಾರೋಗ್ಯದ ನಿಮಿತ್ತ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗುವಿನ ಚಿಕಿತ್ಸೆಗಾಗಿ ದಾನಿಗಳಿಂದ ಸಂಗ್ರಹಿಸಿದ 30,500 ರೂಪಾಯಿಯನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.



ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ವಾಸು ನಾಯ್ಕ್ ನಿಸರ್ಗ, ಗಣೇಶ್ ಬಾಗ್ ನೆಹರುನಗರ ಪುತ್ತೂರು, ದೀಕ್ಷಾ ಮೇಡಂ ಮಂಗಳೂರು, ಶಾಂತಾ ಮೇಡಂ ಪುತ್ತೂರು, ಕಲಾವಿದ ಕೃಷ್ಣಪ್ಪ ಶಿವನಗರ, ವಿದ್ಯಾಧರ ಸರ್, ನವೀನ್ ಸಿಟಿಗುಡ್ಡೆ ಉಪಸ್ಥಿತರಿದ್ದರು. ಸಹಕರಿಸಿದ ಎಲ್ಲಾ ದಾನಿಗಳಿಗೆ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ.










