ಶಿವಧ್ವಜ್ ಶೆಟ್ಟಿ ನಿರ್ದೇಶನದ ‘ಇಂಬು’ ತುಳು ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

0

ಪುತ್ತೂರು: ಪ್ರತಿಷ್ಠಿತ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು ಕರಾವಳಿಯ ದೈವಾರಾಧನೆ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಹೆಣೆದ ಭಾವನಾತ್ಮಕ ಕಥೆಯನ್ನೊಳಗೊಂಡ ಶಿವಧ್ವಜ್ ಶೆಟ್ಟಿ ಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ ಇಂಬು ತುಳು ಚಲನ ಚಿತ್ರ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪಡೆದಿದೆ.


ಸದಭಿರುಚಿಯ ಕಲಾತ್ಮಕ ಚಿತ್ರಗಳನ್ನು ತುಳು ಚಿತ್ರರಂಗಕ್ಕೆ ನೀಡುತ್ತಿರುವ ಶಿವಧ್ವಜ್ ಶೆಟ್ಟಿ ‘ಇಂಬು’ ವಿನಂತಹ ಉತ್ತಮ ಗುಣಮಟ್ಟದ ಚಲನ ಚಿತ್ರವನ್ನು ತುಳು ಚಿತ್ರರಂಗಕ್ಕೆ ನೀಡಿದ್ದಾರೆ.ಕಳೆದ 18 ವರ್ಷಗಳ ಹಿಂದೆ ಇವರ ನಿರ್ದೇಶನದ ಗಗ್ಗರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು ಬಳಿಕ ಹಲವು ಸದಾಭಿರುಚಿಯ ತುಳು ಚಿತ್ರಗಳನ್ನು ಮಾಡಿದ್ದು ಈಗನಿಯ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.

ಚಿತ್ರವನ್ನು ಪ್ರಶಾಂತ್ ರೈ ನಿರ್ಮಿಸಿದ್ದು, ಸಿನೊಯ್ ವಿ. ಜೋಸೆಫ್ ಸಂಗೀತ ನೀಡಿದ್ದು, ಕ್ಯಾಮರಾದಲ್ಲಿ ಸುರೇಶ್ ಬೈರಸಂದ್ರ, ಎಡಿಟಿಂಗ್‌ನಲ್ಲಿ ಗಣೇಶ್ ನೀರ್ ಚಾಲ್ ಕಾರ್ಯನಿರ್ವಹಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ನವೀನ್ ಡಿ. ಪಡೀಲ್ ನಟಿಸಿದ್ದು ಉಳಿದ ತಾರಾಗಣದಲ್ಲಿ ಕಾಂತಾರದ ನಟಿ ಚಂದ್ರಕಲಾ, ಕಾಸರಗೋಡ್ ಚಿನ್ನ, ತಮ್ಮಲಕ್ಷ್ಮಣ್, ಹರ್ಷ ವಾಸು ಶೆಟ್ಟಿ, ಪ್ರಶಂಶ ನಟಿಸಿದ್ದಾರೆ.

ದರ್ಶನ ಪಾತ್ರಿಯಾಗಿ ನವೀನ್ ಡಿ. ಪಡೀಲ್ ಅವರ ಮನೋಜ್ಞ ಅಭಿನಯ…
ವಿದ್ಯುತ್, ಮೊಬೈಲ್ ಎರಡೂ ಇಲ್ಲದ ಸಮಯದಲ್ಲಿ ಹುಟ್ಟಿದ ಅನಕ್ಷರಸ್ಥ, ಮುಗ್ಧ, ಊರಿನ ಎಲ್ಲರಿಗೂ ದೇವರ ಸಮಾನರಾಗಿರುವ ಭೂತ ಕಟ್ಟುವ ಪಾತ್ರಿಯೊಬ್ಬರಿಗೆ ಉಡುಗೊರೆಯಾಗಿ ದೊರೆಯುವ ಆಂಡ್ರೆಡ್ ಸ್ಮಾರ್ಟ್ ಫೋನ್ ನಿಂದ ಯಾವ ರೀತಿ ಅವಮಾನ, ನಷ್ಟ ಅನುಭವಿಸ ಬೇಕಾಗಿ ಬರುತ್ತದೆ ಎಂಬ ಕಥಾ ಹಂದರವುಳ್ಳ ಈ ಚಿತ್ರ 2025 ನೇ ಸಾಲಿನ ಇಂಡಿಯನ್ ಪನೋರಮ ಸೇರಿದಂತೆ 7 ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಿಗೆ ಆಯ್ಕೆಯಾದ ಹಿರಿಮಯನ್ನು ಹೊಂದಿದೆ.ದರ್ಶನ ಪಾತ್ರಿಯಾಗಿ ನವೀನ್ ಡಿ. ಪಡೀಲ್ ರವರ ಗಂಭಿರ ಮನೋಜ್ಞ ಅಭಿನಯ ಮನ ಮುಟ್ಟುವಂತಿದೆ.

ತುಳು ಭಾಷೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು
ನನಗೆ 18 ವರ್ಷಗಳ ಬಳಿಕ ರಾಷ್ಟ್ರೀಯ ಪ್ರಶಸ್ತಿ ಬಂದಿದೆ ಈಗ ಇಂಬು ಚಿತ್ರದಿಂದ ನನಗೆ ಇಂಬು ಸಿಕ್ಕಿದೆ ಎಂದು ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಸಂತಸ ಹಂಚಿಕೊಂಡರು. ಇದೊಂದು ಸಣ್ಣ ಬಜೆಟ್‌ನಲ್ಲಿ ಮಾಡಿರುವ ಕರಾವಳಿ ಜನತೆಯ ಭಾಷೆ, ಸಂಸ್ಕೃತಿ,ನಂಬಿಕೆ,ಜೀವನ ಶೈಲಿಯನ್ನೊಳಗೊಂಡ ಚಲನ ಚಿತ್ರ ಇದಕ್ಕಾಗಿ ನಮ್ಮ ಚಿತ್ರ ತಂಡ ಬಹಳ ಶ್ರಮವಹಿಸಿದೆ.ತುಳು ಭಾಷೆ ಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಿಸಬೇಕೆನ್ನುವುದು ನನ್ನ ಕನಸು. – ಶಿವಧ್ವಜ್ ಶೆಟ್ಟಿ ನಿರ್ದೇಶಕ

ಶಿವಧ್ವಜ್ ಶೆಟ್ಟಿ ನಿರ್ದೇಶಕ

LEAVE A REPLY

Please enter your comment!
Please enter your name here