ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಸ್‌ಗೆ ಚಾಲನೆ

0

ತಂತ್ರಜ್ಞಾನದೊಂದಿಗೆ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಿ- ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗ ಹಾಗೂ ಟೆಕ್ಫಿನಿಟಿ ಟೆಕ್ ಕ್ಲಬ್ ವತಿಯಿಂದ “ಪ್ರಾಜೆಕ್ಟ್ ವರ್ಸ್ 2026” ಕಾರ್ಯಕ್ರಮ ಆಯೋಜಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ ಉದ್ಘಾಟಿಸಿ ಮಾತನಾಡಿ ಆವಿಷ್ಕಾರ ಮತ್ತು ನವೋದ್ಯಮ ಇಂದಿನ ಯುಗದ ಯಶಸ್ಸಿನ ಪ್ರಮುಖ ಅಡಿಗಲ್ಲುಗಳು. ತಂತ್ರಜ್ಞಾನ ಪ್ರತಿದಿನ ಹೊಸ ಆಯಾಮಗಳನ್ನು ತೆರೆದಿಡುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಜಗತ್ತು ವೇಗವಾಗಿ ಮುನ್ನಡೆಯುತ್ತಿದೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಮಾತ್ರವಲ್ಲ, ಹೊಸತನವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಬೇರುಗಳನ್ನು, ಸಂಸ್ಕೃತಿಯನ್ನು, ಮತ್ತು ಮಾನವೀಯ ಮೌಲ್ಯಗಳನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಪ್ರಥಮ ಎಂಸಿಎ ವಿದ್ಯಾರ್ಥಿನಿ ರಕ್ಷಿತಾ ಕೆ ಆರ್ ಮತ್ತು ಬಳಗ ಪ್ರಾರತಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಡೀನ್ ಡಾ| ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಟೆಕ್ಫಿನಿಟಿ ಟೆಕ್ ಕ್ಲಬ್ ನಿರ್ದೇಶಕಿ ಅಕ್ಷತಾ ಬಿ. ವಂದಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನೀಲಂ ಕುಟ್ಟಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶೋಧನ್ ಪಿ. ಜಿ ಹಾಗೂ ಪ್ರಥಮ ಎಂಸಿಎ ವಿದ್ಯಾರ್ಥಿ ವೇಣುಗೋಪಾಲ್ ಸಹಕಾರ ನೀಡಿದರು. ಬಳಿಕ ದ್ವಿತೀಯ ಎಂಸಿಎ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ವಿವಿಧ ಸಾಫ್ಟ್‌ವೇರ್ ಯೋಜನೆಗಳು, ವೆಬ್ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ನವೀನ ತಾಂತ್ರಿಕ ಪರಿಹಾರಗಳನ್ನು ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಪ್ರಥಮ ಎಂಸಿಎ ಹಾಗೂ ಅಂತಿಮ ವರ್ಷದ ಬಿಸಿಎ ಮತ್ತು ಬಿಸಿಎ(ಎಐ & ಎಂಎಲ್), ಪ್ರಥಮ ಹಾಗೂ ದ್ವಿತೀಯ ವರ್ಷದ ಬಿಎಸ್ಸಿ ಡೇಟಾ ಸಯನ್ಸ್ ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here