ಪರಿವಾರ ಬಂಟರ ಸಂಘದಿಂದ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಗದ್ದೆಯಲ್ಲಿ ‘ಕೆಸರ್ಡ್ ಒಂಜಿ ದಿನ’

0

ಪುತ್ತೂರು: ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಮಂಗಳೂರು ಮತ್ತು ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಶಶಿಧರ್ ನಾೖಕ್‌ ರವರ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಜು.26ರಂದು ಬೆಳಿಗ್ಗೆಯಿಂದ ಸಂಜೆಯ ತನಕ ನಡೆಯಿತು.

ಉದ್ಘಾಟನೆ:
ಶ್ರೀ ರಾಘವೇಂದ್ರ ಮಠ ನೆಕ್ಕಿಲಾಡಿ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಉದ್ಯಮಿ ಉದಯ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ನಂಬಿಕೊಂಡು ಬಂದ ದೈವ ದೇವರುಗಳ ಆಶೀರ್ವಾದದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಯುವಕರ ಹುಮ್ಮಸು ಇದೇ ರೀತಿ ಮುಂದುವರಿಯಲಿ ಎಂದರು.


ಮುಖ್ಯ ಅಭ್ಯಾಗತರಾಗಿದ್ದ ಧರ್ಮಸ್ಥಳ ಜನ ಜಾಗೃತಿ ವೇದಿಕೆ ಪುತ್ತೂರು ಮತ್ತು ಭಾರತೀಯ ಜನತಾ ಪಕ್ಷದ ಪುತ್ತೂರು ತಾಲೂಕಿನ ಮಾಧ್ಯಮ ಪ್ರಮುಖ್ ಸತೀಶ್ ನಾೖಕ್‌ ಪರ್ಲಡ್ಕ ಮಾತನಾಡಿ ಸಮಾಜ ಬಾಂಧವರ ಪೂರ್ಣ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿಯಾಗಲಿ.ಕೃಷಿ ಕಾಯಕವನ್ನೇ ಮರೆಯುತ್ತಿರುವ ಕಾಲ ಘಟ್ಟದಲ್ಲಿ ನಾವಿದ್ದೇವೆ ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದು ಎಂದರು.


ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ನಾೖಕ್‌ ಮಾತನಾಡಿ ತುಳುನಾಡಿನ ಪಾರಂಪರಿಕ ಕೃಷಿ ಪದ್ದತಿ ನಶಿಸುತ್ತಿರುವ ಈ ಸಮಯದಲ್ಲಿ ನಮ್ಮ ಹಿರಿಯರು ಬದುಕಿದ ರೀತಿ, ಮಳೆ ಚಳಿ ಬಿಸಿಲೆನ್ನದೆ ದುಡಿಯುತಿದ್ದ ಪರಿ ಹೇಗಿತ್ತು ಇದನ್ನೆಲ್ಲ ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕಾರ್‍ಯಕ್ರಮ ಅತ್ಯಗತ್ಯ ಎಂದರು.


ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಗೌರವಾಧ್ಯಕ್ಷ ಸುಧಾಕರ್ ಕೆ.ಪಿ. ಮಾತನಾಡಿ ಪೇಟೆ ಸೇರಿ ಅಲ್ಲಿನ ಅಧುನಿಕತೆಗೆ ಒಗ್ಗಿಕೊಂಡ ಇಂದಿನ ಮಕ್ಕಳಿಗೆ ನಮ್ಮ ಹಿರಿಯರ ಸಂಸ್ಕ್ರತಿ, ಸಂಪ್ರದಾಯವನ್ನು ತಿಳಿಯುವ ಜೊತೆಗೆ ಅವರನ್ನೇಲ್ಲ ಒಟ್ಟು ಸೇರುವಂತೆ ಮಾಡಲು ಇಂತಹ ಕಾರ್ಯಕ್ರಮದ ಆಯೋಜನೆ ಅತ್ಯಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪರಿವಾರ ಬಂಟರ ಸಂಘ ಮಂಗಳೂರು ಇದರ ನಿಯೋಜಿತ ಸದಸ್ಯರಾದ ಲ|ಟಿ.ಸದಾಶಿವ ನಾೖಕ್‌ ಮಾತನಾಡಿ ಜಾನಪದ ಕ್ರೀಡೆಗಳು,ಆಚಾರ ವಿಚಾರಗಳನ್ನು ಮರೆಯುತ್ತಿರುವ ಸಂಧರ್ಭದಲ್ಲಿ ಅದನ್ನು ನೆನಪಿಡುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರವಹಿಸುತ್ತದೆ ಎಂದರು.

ಗದ್ದೆಯ ಯಜಮಾನ ಶಶಿಧರ್ ನಾೖಕ್‌, ಪುತ್ತೂರು ವಲಯದ ಕೆಸರುಗದ್ದೆ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ನಾೖಕ್‌ ಪಾಂಗ್ಲಾಯಿ, ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿಯ ಕಾರ್‍ಯದರ್ಶಿ ಮನೋಹರ್ ನಾೖಕ್‌, ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಅಧ್ಯಕ್ಷ ಸರ್ವೇಶ್ ನಾೖಕ್‌ ಪಾದೆ, ಉಪಾಧ್ಯಕ್ಷರಾದ ಬಾಲಕೃಷ್ಣ ನಾೖಕ್‌ ನಂದಿಲ,ಮಹಿಳಾ ವೇದಿಕೆಯ ಅಧ್ಯಕ್ಷೆ ಸುಪ್ರಭಾ ನಾೖಕ್‌, ಯುವ ಪರಿವಾರ ಬಂಟರ ವೇದಿಕೆಯ ಅಧ್ಯಕ್ಷ ನಿರೋಷ್ ನಾೖಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸರುಗದ್ದೆ ಸಮಿತಿಯ ಅಧ್ಯಕ್ಷರಾದ ಗೀತಾ ಅರ್ಯಾಪು, ಉಪಾಧ್ಯಕ್ಷರಾದ ಶರತ್ ಚಂದ್ರ ನಾೖಕ್‌ ಬೆದ್ರಾಳ, ಕಾರ್ಯದರ್ಶಿಗಳಾದ ಯಶ್ವಿನ್ ನಾೖಕ್‌ ಅಣಾಜೆ ಮತ್ತು ಸೌಮ್ಯ ಸುರೇಶ್ ಕೊಡಿಪ್ಪಾಡಿ, ಕಾರ್ಯದರ್ಶಿ ಸಚಿನ್ ನಾೖಕ್‌ ಕೊಡಂಗೆ, ಜೊತೆ ಕಾರ್ಯದರ್ಶಿ ಮಧುಶ್ರೀ ಕುಂಜಾರು, ಅಶ್ವಿನಿ ಕುಂಜಾರು, ವೈಭವಿ ಕುಂಜಾರು, ರಶ್ಮೀ ಉಮಾ ಶಂಕರ್ ಪಾಂಗ್ಲಾಯಿ, ಅಂಕಿತಾ, ಸಂಘಟನಾ ಕಾರ್ಯದರ್ಶಿ ಜಗತ್ ದೇಂತಡ್ಕ, ಪ್ರವೀಣ್ ನಾೖಕ್‌ ಕೊಟ್ಟಿಬೆಟ್ಟು,ಗಗನ್ ನಾೖಕ್‌ ,ಲಿಖಿತ್, ನಿತೇಶ್, ವೀಕ್ಷಿತ್ ಕಲ್ಲಿಮಾರ್,ರೇಷ್ಮಾ ಸುಧಾಕರ್,ಶಖಿಲಾ ನಾೖಕ್‌ ,ಮಿತೇಶ್ ನಾೖಕ್‌ , ಹರ್ಷಿಲ್ ನಾೖಕ್‌ ,ಸುನಿಲ್ ಬಿ.ಎಸ್,ವಿಕ್ರಂ ನಾೖಕ್‌ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಯಶ್ವಿ ಪ್ರಾರ್ಥಿಸಿದರು,ಯುವ ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಕಾರ್ಯದರ್ಶಿ ಕವನ್ ನಾೖಕ್‌ ಸ್ವಾಗತಿಸಿದರು. ಅನಿತಾ ವಸಂತ್ ನಾೖಕ್‌ ಮತ್ತು ಸ್ಮಿತಾ ಸುಜಿತ್ ನಾೖಕ್‌ ಕಾರ್ಯಕ್ರಮ ನಿರೂಪಿಸಿದರು. ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಅಧ್ಯಕ್ಷ ಸರ್ವೇಶ್ ನಾೖಕ್‌ ಪಾದೆ ವಂದಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪರಿವಾರ ಬಂಟರ ಸಂಘ ಮುದ್ರಿತ ಜರ್ಸಿಯನ್ನು ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ಕೆಸರುಗದ್ದೆಗೆ ತೆಂಗಿನಕಾಯಿ ಒಡೆದು ಎಲ್ಲರು ಗದ್ದೆಗಿಳಿದರು ಬಳಿಕ ಅಟೋಟ ಸ್ಪರ್ಧೆ ಪ್ರಾರಭವಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here