ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ವತಿಯಿಂದ ತೃತೀಯ ವರ್ಷದ ಕೆಸರ್ಡ್ ಒಂದು ದಿನ ಕಾರ್ಯಕ್ರಮ

0

ಗದ್ದೆ ಬೇಸಾಯ ಪದ್ಲತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ – ಮೋಹನ್ ದಾಸ್ ರೈ, ಕುಂಬ್ರ

ಬಡಗನ್ನೂರು: ಕೆಸರ್ಡ್ ಒಂದು ದಿನ ಕಾರ್ಯಕ್ರಮ ಗದ್ದೆ ಬೇಸಾಯ ಪದ್ಲತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಎಂದು ಕುಂಬ್ರ. ಮಾತೃಶ್ರೀ ಅರ್ಥ್‌ ಮೂವರ್ಸ್ ಮಾಲಕ ಮೋಹನ್ ದಾಸ್ ರೈ, ಕುಂಬ್ರ, ಹೇಳಿದರು.


ಅವರು ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ನಡೆದ ತೃತೀಯ ವರ್ಷದ ಕೆಸರ್ಡ್ ಒಂದು ದಿನ ಕಾರ್ಯಕ್ರಮವನ್ನು ದೀಪ ಉದ್ದೀಪನ ಗೊಳಿಸಿ ತೆಂಗಿನ ಹಿಂಗಾರವನ್ನು ಹರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಹಿಂದಿನ ಕಾಲದಲ್ಲಿ ಹಿರಿಯರು ಗದ್ದೆ ಬೇಸಾಯ ಪ್ರಧಾನವಾಗಿತ್ತು ಆನಂತರದ ದಿನಗಳಲ್ಲಿ ಗದ್ದೆ ಬೇಸಾಯ ಪದ್ದತಿ ಕಡಿಮೆಯಾಗುತ್ತ ಬಂದು ಈಗ ಕೆಲವು ಭಾಗದಲ್ಲಿ ಮಾತ್ತ ಉಳಿದುಕೊಂಡಿದೆ. ಇದರಿಂದ ಈಗೀನ ಮಕ್ಕಳಿಗೆ ಗದ್ದೆ ಬೇಸಾಯ ಪದ್ದತಿ ಬಗ್ಗೆ ಅರಿವು ಇಲ್ಲ ಹಾಗೂ ಮಣ್ಣಿಗೆ ಒಂದು ವಿಶೇಷ ಔಷದೀಯ ಗುಣ ಹೊಂದಿರುವುದರಿಂದ ಚರ್ಮ ರೋಗವನ್ನು ನಿವಾರಣೆ ಮಾಡುವ ಶಕ್ತಿ ಹೊಂದಿದೆ ಇದರಿಂದ ಕೆಸರ್ಡ್ ಒಂದು ದಿನ ಕಾರ್ಯಕ್ರಮ ಗದ್ದೆ ಬೇಸಾಯ ಪದ್ಲತಿಯ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆ ಎಂದು ಕುಂಬ್ರ. ಮಾತೃಶ್ರೀ ಅರ್ಥ್‌ ಮೂವರ್ಸ್ ಮಾಲಕ ಮೋಹನ್ ದಾಸ್ ರೈ, ಕುಂಬ್ರ, ಹೇಳಿದರು.
ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಆದ್ದೂರಿಯಲ್ಲಿ ಯಶಸ್ವಿಯಾಗಿ ನಡೆದು ಇಂದು ಮೂರನೇ ವರ್ಷದ ಕೆಸರ್ಡ್ ಒಂದು ದಿನ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಖುಷಿ ತಂದಿದೆ. ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಶುಭ ಹಾರೖೆಸಿದರು.


ಕಾರ್ಯಕ್ರಮವು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದ ಡಾ| ರಮಾ ಕೆ.ಟಿ. ಭಂಡಾರಿ ಪೇರಾಲು ವೇದಿಕೆ ಮುಂಭಾಗದಲ್ಲಿ ಗದ್ದೆಯಲ್ಲಿ ಜು. 26 ರಂದು ನಡೆಯಿತು.
ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಬಿ. ಮಹಾಲಿಂಗ ಭಟ್,
ಕರ್ನಪ್ಪಾಡಿ ಬ್ರಹ್ಮ ಬೈದರ್ಕಳ ಗರಡಿ, ಅಧ್ಯಕ್ಷ ಶಿವಪ್ಪ ಪೂಜಾರಿ, ನುಳಿಯಾಲು, ಪ್ರಗತಿಪರ ಕೃಷಿಕ ಕೃಷ್ಣ ರೈ, ಕುದ್ದಾಡಿ, ಪುತ್ತೂರು ಸಿವಿಲ್ ಇಂಜಿನಿಯರ್ ಕೃಷ್ಣಪ್ರಸಾದ್ ರೈ, ಪಡುಮಲೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ರೖೆ ಮೇಗಿನಮನೆ, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಂಕರಿ ನಾರಾಯಣ, ಪಟ್ಟೆ, ಪ್ರಗತಿಪರ ಕೃಷಿಕ ಅಜಿತ್ ರೈ, ಮುಳಿಪಡ್ಡು,
ರಾಧಾಕೃಷ್ಣ ರೈ, ಪಟ್ಟೆ ಉಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಹರಿಪ್ರಸಾದ್ ರೖೆ ಉದ್ಯಮಿ ರವಿಪ್ರಸಾದ್ ಕಾವು ಉಪಸ್ಥಿತರಿದ್ದರು.


ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಉಪಾಧ್ಯಕ್ಷ ಡಾ. ರವೀಶ್ ಪಡುಮಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ರೖೆ ಪಳ್ಳತ್ತಾರು ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮದ ನಿರೂಪಿಸಿದರು. ವಿಜಯ್ ಅತ್ತಾಜೆ ಕ್ರೀಡಾಕೂಟದ ನಿರೂಪಿಸಿದರು.

ಗೌರವ ಸನ್ಮಾನ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ ಸುಮಾರು 24 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಮಹಾಲಿಂಗ ಭಟ್ ಬಿ, ಪಡುಮಲೆ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗಂಗಾಧರ ರೖೆ ಮೇಗಿನಮನೆ, ಕೆಸರ್ಡ್ ಒಂದು ದಿನ ಕಾರ್ಯಕ್ರಮದ ರೂವಾರಿ ಜನಾರ್ದನ ಪೂಜಾರಿ ಪದಡ್ಕ ಹಾಗೂ 2025 -26ನೇ ಸಾಲಿನ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ 602 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುವ ಸುಳ್ಯಪದವು ನವೋದಯ ಪ್ರೌಢಶಾಲಾ ವಿದ್ಯಾರ್ಥಿ ತೇಜಸ್ ಕನ್ನಡ್ಕ ರವರುಗಳನ್ನು ಪೇಟ, ಧರಿಸಿ ಸಾಲು ಹಾರ ಫಲಪುಷ್ಪ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here